ಶನಿವಾರ, ಮೇ 15, 2021
24 °C

ಪಾಕಿಸ್ತಾನದಲ್ಲಿ ಆರಂಭವಾಗಿದೆ ಲೈಂಗಿಕ ಅಲ್ಪಸಂಖ್ಯಾತರ ಇಸ್ಲಾಮಿಕ್ ಶಾಲೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Credit: Reuters Photo

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿಯೇ ಪ್ರತ್ಯೇಕ ಮತ್ತು ಮೊದಲ ಮದ್ರಸಾವೊಂದು ಆರಂಭವಾಗಿದೆ. ಇದನ್ನು ಆರಂಭಿಸಿದ್ದು ರಾಣಿ ಖಾನ್ ಎಂಬ ಲೈಂಗಿಕ ಅಲ್ಪಸಂಖ್ಯಾತ ಮಹಿಳೆ. ಅದಕ್ಕೆ ತನ್ನ ಉಳಿತಾಯದ ಹಣವನ್ನು ಬಳಸಿಕೊಂಡಿದ್ದಾರೆ.

ಇಸ್ಲಾಂ ಮೂಲಭೂತವಾದದ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಇಂತಹ ಮದ್ರಸಾ ಸ್ಥಾಪನೆ ಮಹತ್ವದ್ದಾಗಿದೆ. ಮಸೀದಿ ಪ್ರವೇಶ ಮತ್ತು ಶಾಲೆಗೆ ತೆರಳುವುದು ಸಹಿತ ವಿವಿಧ ತಾಣಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಅಧಿಕೃತವಾಗಿ ಪ್ರವೇಶ ನಿಷೇಧಿಸಿಲ್ಲವಾದರೂ, ಅವರು ವಿವಿಧ ತೊಂದರೆ ಎದುರಿಸುತ್ತಿದ್ದಾರೆ.

ಬಹುತೇಕ ಕುಟುಂಬಗಳು ಲೈಂಗಿಕ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುವುದಿಲ್ಲ. ಅವರನ್ನು ಮನೆಯಿಂದ ಹೊರಗೆ ಅಟ್ಟುತ್ತಾರೆ. ಇದರಿಂದ ಕೆಲವೊಮ್ಮೆ ಅವರು ತಪ್ಪು ಕೆಲಸಗಳನ್ನು ಆಯ್ದುಕೊಳ್ಳುತ್ತಾರೆ ಎಂದು ರಾಣಿ ಖಾನ್ ಹೇಳುತ್ತಾರೆ.

ತಾನು ಕೂಡ ಇಂತಹ ಸಮಸ್ಯೆ ಎದುರಿಸಿದ್ದು, 13ನೇ ವಯಸ್ಸಿಗೆ ಮನೆಯಿಂದ ಹೊರಹಾಕಲ್ಪಟ್ಟು, ಭಿಕ್ಷಾಟನೆಗೆ ತೆರಳಬೇಕಾಯಿತು ಎಂದು ಹೇಳಿಕೊಂಡಿರುವ ಖಾನ್, 17ನೇ ವಯಸ್ಸಿಗೆ ಲೈಂಗಿಕ ಅಲ್ಪಸಂಖ್ಯಾತರ ಗುಂಪು ಸೇರಿಕೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ.

ಧರ್ಮ ಮತ್ತು ಸಮುದಾಯಕ್ಕಾಗಿ ಏನಾದರೂ ಮಾಡಬೇಕೆಂದು ಅನ್ನಿಸಿದಾಗ, ರಾಣಿ ಖಾನ್ ತಾವೇ ಉಳಿತಾಯದ ಹಣ ಬಳಸಿಕೊಂಡು ಲೈಂಗಿಕ ಅಲ್ಪಸಂಖ್ಯಾತರಿಗಾಗಿಗೇ ಇರುವ ಮದ್ರಸಾ ಆರಂಭಿಸಿ, ಅಲ್ಲಿ ಕುರಾನ್ ಹೇಳಿಕೊಡುತ್ತಿದ್ದಾರೆ. ಸರ್ಕಾರದಿಂದ ಅನುದಾನ ಬರದಿದ್ದರೂ, ಅಧಿಕಾರಿಗಳು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಖಾನ್ ಹೇಳಿದ್ದಾರೆ. ಜತೆಗೆ ಅಲ್ಪ-ಸ್ವಲ್ಪ ದೇಣಿಗೆಯಿಂದ ಮದ್ರಸಾ ನಡೆಸುತ್ತಿದ್ದಾರೆ.

ಪಾಕಿಸ್ತಾನ ಸಂಸತ್ 2018ರಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾನ್ಯತೆ ನೀಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು