ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಇಬ್ಬರು ಸಹೋದರಿಯರ 'ಮರ್ಯಾದಾ ಹತ್ಯೆ': 6 ಮಂದಿ ಬಂಧನ

Last Updated 22 ಮೇ 2022, 15:47 IST
ಅಕ್ಷರ ಗಾತ್ರ

ಲಾಹೋರ್‌: ಇಬ್ಬರು ಸಹೋದರಿಯರ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್‌ ಪ್ರಾಂತ್ಯದಲ್ಲಿ 6 ಮಂದಿ ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನ ಮೂಲದ, ಸ್ಪೇನ್‌ನಲ್ಲಿ ನೆಲೆಸಿದ್ದ ಇಬ್ಬರು ಸಹೋದರಿಯರನ್ನು ಕೌಟುಂಬಿಕ ಕತೆ ಹೆಣೆದು ಉಪಾಯದಿಂದ ಪಂಜಾಬ್‌ ಪ್ರಾಂತ್ಯಕ್ಕೆ ಕರೆಯಿಸಿಕೊಂಡಿದ್ದ ಆರೋಪಿಗಳು, ಇಬ್ಬರ ಮೇಲೆ ಹಲ್ಲೆ ನಡೆಸಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

24 ವರ್ಷದ ಅರೂಜ್‌ ಅಬ್ಬಾಸ್‌ ಮತ್ತು ಆಕೆಯ ಸಹೋದರಿ 21 ವರ್ಷದ ಅನೀಸಾ ಅಬ್ಬಾಸ್‌ ಅವರನ್ನು ಗುಜ್ರಾತ್‌ ಜಿಲ್ಲೆಯ ನಥಿಯಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಇದೊಂದು ಮರ್ಯಾದಾ ಹತ್ಯೆಯೆಂದು ತಿಳಿದುಬಂದಿದೆ. ಸಹೋದರರು ಮತ್ತು ಸಂಬಂಧಿಕರು ಸೇರಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಪಾಕಿಸ್ತಾನದ ಯುವಕರನ್ನು ಇಬ್ಬರು ಸಹೋದರಿಯರು ವಿವಾಹವಾಗಿದ್ದರು. ಇದೀಗ ಅವರಿಗೆ ವಿಚ್ಛೇದನ ನೀಡಬೇಕು. ತಾವು ತೋರಿಸಿದ ಯುವಕರನ್ನು ವಿವಾಹವಾಗಬೇಕು ಎಂದು ಆರೋಪಿಗಳು ಒತ್ತಡ ಹೇರಿದ್ದರು. ಈ ಸಂದರ್ಭ ಜಗಳ ಉಂಟಾಗಿದ್ದು, ಸಹೋದರಿಯರಿಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ತಾಯಿಯನ್ನು ಕೋಣೆಯೊಂದಕ್ಕೆ ಕೂಡಿ ಹಾಕಿ ಕೃತ್ಯ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT