ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಗ್ದಂಡನೆ: ಉಸ್ತುವಾರಿ ತಂಡ ನೇಮಕ ಮಾಡಿದ ಸ್ಪೀಕರ್‌ ಪೆಲೋಸಿ

Last Updated 13 ಜನವರಿ 2021, 5:41 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಂಡಿಸಲಾಗುತ್ತಿರುವ ವಾಗ್ದಂಡನೆ ನಿರ್ಣಯಕ್ಕೆ ಸಂಬಂಧಿಸಿದಂತೆ ಡೆಮಾಕ್ರಟಿಕ್‌ ಪಕ್ಷದ 9 ಜನ ಸಂಸದರನ್ನು ಒಳಗೊಂಡ ಉಸ್ತುವಾರಿ ತಂಡವನ್ನು ಸ್ಪೀಕರ್‌ ನ್ಯಾನ್ಸಿ ಪೆಲೋಸಿ ನೇಮಕ ಮಾಡಿದ್ದಾರೆ.

ಮೇರಿಲ್ಯಾಂಡ್‌ ಸಂಸದ ಜೆಮಿ ರಸ್ಕಿನ್‌ ಈ ತಂಡದ ನೇತೃತ್ವ ವಹಿಸುವರು. ಈ ತಂಡದಲ್ಲಿ ಮೂವರು ಮಹಿಳೆಯರೂ ಇದ್ದಾರೆ.

58 ವರ್ಷದ ರಸ್ಕಿನ್‌ ಅವರು 25 ವರ್ಷಗಳ ಕಾಲ ದೇಶದ ಸಂವಿಧಾನ ಕುರಿತು ಬೋಧನೆ ಮಾಡಿದ ಅನುಭವ ಹೊಂದಿದ್ದಾರೆ. ಸಂಸತ್‌ನಲ್ಲಿ ನಡೆಯುವ ಚರ್ಚೆಗಳಲ್ಲಿ ಅವರು ಮುಂಚೂಣಿಯಲ್ಲಿರುತ್ತಾರೆ.

ಜ.6ರಂದು ಕ್ಯಾಪಿಟಲ್‌ ಹಿಲ್‌ ಮೇಲೆ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ ಸೇರಿ ಐವರು ಮೃತಪಟ್ಟಿದ್ದರು. ಈ ಘಟನೆಗೆ ಟ್ರಂಪ್‌ ಅವರ ಪ್ರಚೋದನೆಯೇ ಕಾರಣ ಎಂದು ಆರೋಪಿಸಿರುವ ಡೆಮಾಕ್ರಟಿಕ್‌ ಸಂಸದರು, ಅವರ ವಿರುದ್ಧ ವಾಗ್ದಂಡನೆಗೆ ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT