ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲೆ ಫೈಜರ್–ಬಯೋಎನ್‌ಟೆಕ್ ಕೋವಿಡ್‌ ಲಸಿಕೆ ಶೇ 90.7ರಷ್ಟು ಪರಿಣಾಮಕಾರಿ

Last Updated 22 ಅಕ್ಟೋಬರ್ 2021, 14:07 IST
ಅಕ್ಷರ ಗಾತ್ರ

ನ್ಯೂಯಾರ್ಕ್: 5ರಿಂದ 11 ವರ್ಷದ ಮಕ್ಕಳ ಮೇಲೆ ನಡೆಸಿದ ಪ್ರಯೋಗದಲ್ಲಿ ನಮ್ಮ ಕೋವಿಡ್–19 ಲಸಿಕೆಯು ಶೇ 90.7ರಷ್ಟು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ ಎಂದು ಅಮೆರಿಕದ ಫೈಜರ್–ಬಯೋಎನ್‌ಟೆಕ್ ಕಂಪನಿ ಹೇಳಿಕೊಂಡಿದೆ.

ಕೋವಿಡ್‌ಗೆ ಚಿಕಿತ್ಸೆ ಪಡೆದ ಹಾಗೂ ಲಸಿಕೆ ಪಡೆದ ಮಕ್ಕಳಲ್ಲಿರುವ ರೋಗನಿರೋಧಕ ಶಕ್ತಿಯನ್ನು ತುಲನೆ ಮಾಡಲಾಗಿತ್ತು ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತಕ್ಕೆ ದಾಖಲೆ ಸಲ್ಲಿಸಿದ ಬಳಿಕ ಕಂಪನಿ ಹೇಳಿದೆ.

ಒಟ್ಟು 2,268 ಮಕ್ಕಳು ಪ್ರಯೋಗಕ್ಕೆ ಒಳಪಟ್ಟಿದ್ದರು. ಈ ಪೈಕಿ ಕೋವಿಡ್‌ಗೆ ಚಿಕಿತ್ಸೆ ಪಡೆದವರು ಮತ್ತು ಲಸಿಕೆ ಮಾತ್ರ ಪಡೆದ ಮಕ್ಕಳೂ ಇದ್ದರು. ಕೋವಿಡ್‌ಗೆ ಚಿಕಿತ್ಸೆ ಪಡೆದ ಮಕ್ಕಳ ಜತೆ ಹೋಲಿಸಿದರೂ ಲಸಿಕೆ ಪಡೆದವರಲ್ಲಿ ಅದರ ಪರಿಣಾಮಕಾರಿತ್ವ ಶೇ 90.7ರಷ್ಟಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT