ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕುಲುಕಿದ ಮೋದಿ–ಷಿ ಜಿನ್‌ಪಿಂಗ್: ಗಾಲ್ವಾನ್ ಸಂಘರ್ಷದ ನಂತರ ಮುನಿಸುಂಟಾಗಿತ್ತು

Last Updated 15 ನವೆಂಬರ್ 2022, 16:13 IST
ಅಕ್ಷರ ಗಾತ್ರ

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಬಹಳ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮುಖಾಮುಖಿಯಾಗಿದ್ದಾರೆ.

ಅಲ್ಲದೇ ಉಬಯ ನಾಯಕರು ಪರಸ್ಪರ ಹಸ್ತಲಾಘವ ಮಾಡಿ ಗಮನ ಸೆಳೆದಿದ್ದಾರೆ.

2020 ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ–ಚೀನಾ ಸೇನೆಯ ಮಧ್ಯೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಮೃತರಾಗಿದ್ದರು. ಅಲ್ಲದೇ ಚೀನಾದ ಸೈನಿಕರೂ ಮೃತರಾಗಿದ್ದರು. ಈ ಘಟನೆ ಚೀನಾ–ಭಾರತದ ಮಧ್ಯೆ ವೈಮನಸ್ಸು ಸೃಷ್ಟಿಸಿತ್ತು.

ಸಮಾವೇಶದಲ್ಲಿ ಮಂಗಳವಾರಇಂಡೋನೇಷ್ಯಾ ಅಧ್ಯಕ್ಷರು ಔತಣಕೂಟ ಆಯೋಜಿಸಿದ್ದರು. ಔತಣಕೂಟಕ್ಕೆ ತೆರಳುವ ವೇಳೆ ಮೋದಿ ಹಾಗೂ ಜಿನ್‌ಪಿಂಗ್ ಪರಸ್ಪರ ಹಸ್ತಲಾಘವ ಮಾಡಿ ಶುಭಾಶಯ ಕೋರಿದರು. ಆದರೆ, ಇಬ್ಬರೂ ನಾಯಕರ ದ್ವೀಪಕ್ಷಿಯ ಮಾತುಕತೆ ನಡೆಯಲಿದೆಯಾ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಭರ್ಜರಿ ಸ್ವಾಗತ: ಇದಕ್ಕೂ ಮುನ್ನ, ಸಭಾಗೃಹಕ್ಕೆ ಮೋದಿ ಅವರು ಪ್ರವೇಶಿಸುತ್ತಿದ್ದಂತೆಯೇ ಭಾರತೀಯರಿಂದ ಭಾರಿ ಕರತಾಡನ, ಹರ್ಷೋದ್ಗಾರ ಕಂಡುಬಂತು. ‘ಭಾರತ್‌ ಮಾತಾ ಕಿ ಜೈ’ ಎಂಬ ಘೋಷಣೆಗಳು ಮಾರ್ದನಿಸಿದವು.ವೇದಿಕೆಯಲ್ಲಿ ಲಯಬದ್ಧವಾಗಿ ಡ್ರಮ್‌ ಬಾರಿಸುತ್ತಿದ್ದವರತ್ತ ಮೋದಿ ತೆರಳಿದರು. ಕೆಲ ಕಾಲ ಅವರೂ ಡ್ರಮ್‌ ಬಾರಿಸಿ, ನೆರೆದಿದ್ದವರನ್ನು ಹುರಿದುಂಬಿಸಿದರು.

ದ್ವಿಪಕ್ಷೀಯ ಬಾಂಧವ್ಯ:ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್,ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರೊಂದಿಗೆ ಮಾತುಕತೆ ನಡೆಸಿ, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚಿಸಿದರು ಎಂದು ಪಿಎಂಒ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT