ಬುಧವಾರ, ಜೂನ್ 23, 2021
23 °C

ಪ್ರಧಾನಿ ಮೋದಿ ‘ಬಂಗಬಂಧು‘ ಸ್ಮಾರಕಕ್ಕೆಭೇಟಿ, ಪುಷ್ಪ ನಮನ ಸಲ್ಲಿಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಾಂಗ್ಲಾದ ನೈರುತ್ಯ ಗೋಪಾಲ್‌ಗಂಜ್‌ ಜಿಲ್ಲೆಯ ತುಂಗಿಪಾರದಲ್ಲಿರುವ ಶೇಖ್‌ ಮುಜಿಬುರ್ ರಹಮಾನ್ ಅವರ ‘ಬಂಗಬಂಧು‘ ಸ್ಮಾರಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

ಮುಜಿಬುರ್ ರಹಮಾನ್ ಅವರ ಪುತ್ರಿ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರಿಂದ ಪುಷ್ಪಗುಚ್ಚವನ್ನು ಪಡೆದ ಅವರು, ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಹಮಾನ್ ಅವರ ಕಿರಿಯ ಪುತ್ರಿಯೂ ಹಾಜರಿದ್ದರು.

ಕೋವಿಡ್‌ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿದ್ದ ಮೋದಿಯವರು ಬಂಗಬಂಧು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಕೆಲವು ನಿಮಿಷ ಮೌನ ಆಚರಿಸಿದರು. ಇದಕ್ಕೂ ಮುನ್ನ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಸ್ಮಾರಕಕ್ಕೆ ‘ಫಾತಿಹ‘ ಅರ್ಪಿಸಿದರು. ಪ್ರಧಾನಿ ನರೇಂದ್ರ ಮೋದಿ, ‘ಬಂಗಬಂಧು‘ ಸ್ಮಾರಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಣ್ಯರು.

ಮೋದಿಯವರು ಸ್ಮಾರಕದ ಸಂಕಿರಣದಲ್ಲಿದ್ದ ‘ಸಂದರ್ಶಕರ ಪುಸ್ತಕ‘ದಲ್ಲಿ ಸಹಿ ಹಾಕಿ, ಪ್ರಾಂಗಣದಲ್ಲಿ ಗಿಡನೆಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು