ಗುರುವಾರ , ಮೇ 13, 2021
16 °C

8 ತಿಂಗಳ ತಮ್ಮನಿಗೆ ಅರಿವಿಲ್ಲದೇ ಗುಂಡಿಟ್ಟ 3 ವರ್ಷದ ಬಾಲಕ: ಮಗು ಸಾವು

ಎ‍ಪಿ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ಮೂರು ವರ್ಷದ ಮಗು, ನವಜಾತ ಶಿಶುವಿನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶಿಶು ಮೃತಪಟ್ಟ ಘಟನೆ ಹ್ಯೂಸ್ಟನ್‌ನಲ್ಲಿ ನಡೆದಿದೆ.

‘3 ವರ್ಷದ ಬಾಲಕನ ಕೈಗೆ ಗನ್‌ ಸಿಕ್ಕಿದ್ದು, ಆತ ತಿಳಿಯದೇ ತನ್ನ ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ. 8 ತಿಂಗಳ ಮಗುವಿನ ಹೊಟ್ಟೆಗೆ ಗುಂಡು ತಗುಲಿದೆ. ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿತು’ ಎಂದು ಹ್ಯೂಸ್ಟನ್ ಪೊಲೀಸ್ ಇಲಾಖೆ ಸಹಾಯಕ ಮುಖ್ಯಸ್ಥ ವೆಂಡಿ ಬೇಂಬ್ರಿಡ್ಜ್ ತಿಳಿಸಿದರು.

‘ನಿಮ್ಮ ಮನೆಯಲ್ಲಿರುವ ಯಾವುದೇ ಗನ್‌ ಅಥವಾ ಇತರೆ ಶಸ್ತ್ರಾಸ್ತ್ರಗಳನ್ನು ಮಕ್ಕಳ ಕೈಗೆ ಸಿಗುವ ರೀತಿಯಲ್ಲಿ ಇಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು