ಮಂಗಳವಾರ, ಜನವರಿ 31, 2023
19 °C

ಪಾಕ್‌: ಸಹಜ ಸ್ಥಿತಿಗೆ ಮರಳಿದ ವಿದ್ಯುತ್‌ ಪೂರೈಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ವಿದ್ಯುತ್ ವಿತರಣಾ ಜಾಲದಲ್ಲಿ ಕಂಡುಬಂದಿದ್ದ ಲೋಪ ಸರಿಪಡಿಸಲಾಗಿದ್ದು, ಮಂಗಳವಾರ ವಿದ್ಯುತ್‌ ಪೂರೈಕೆಯು ದೇಶದಾದ್ಯಂತ ಸಹಜ ಸ್ಥಿತಿಗೆ ಮರಳಿತು.

ವಿದ್ಯುತ್‌ ಕಡಿತದಿಂದ ಸೋಮವಾರ ರಾತ್ರಿ ಕೋಟ್ಯಂತರ ಜನರು ಕಗ್ಗತ್ತಲಲ್ಲಿ ಕಳೆದಿದ್ದರು. ಔದ್ಯಮಿಕ ಕ್ಷೇತ್ರಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ನಷ್ಟವಾಗಿತ್ತು.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿಸಿರುವ ಇಂಧನ ಸಚಿವ ಖುರ್ರಂ ದಸ್ತಗೀರ್, ‘ವಿದ್ಯುತ್‌ ವಿತರಣಾ ವ್ಯವಸ್ಥೆ ಸರಿಪಡಿಸಲು ಹೆಚ್ಚಿನ ಹೂಡಿಕೆ ಅಗತ್ಯವಾಗಿದೆ. ದಶಕಗಳಿಂದ ಇದನ್ನು ಕಡೆಗಣಿಸಲಾಗಿದೆ’ ಎಂದು ತಿಳಿಸಿದರು.

ವಿದ್ಯುತ್ ಕಡಿತದಿಂದ ಜನರಿಗಾದ ಅನನುಕೂಲತೆಗೆ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು