ಬುಧವಾರ, ಜನವರಿ 20, 2021
21 °C

ಪಾಕಿಸ್ತಾನದ ಹಲವೆಡೆ ವಿದ್ಯುತ್‌ ಪೂರೈಕೆ ಮರು ಸ್ಥಾಪನೆ ಸಫಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಲಾಹೋರ್‌ ಸೇರಿದಂತೆ ಪಾಕಿಸ್ತಾನದ ಅನೇಕ ನಗರಗಳಲ್ಲಿ ಭಾನುವಾರ ವಿದ್ಯುತ್ ಸರಬರಾಜನ್ನು ಮರು ಸ್ಥಾಪಿಸಲಾಯಿತು.

ಪಾಕಿಸ್ತಾನದ ಬಹುತೇಕ ಕಡೆಗಳಲ್ಲಿ ಶನಿವಾರ ಮಧ್ಯರಾತ್ರಿ ವಿದ್ಯುತ್‌ ವಿತರಣಾ ವ್ಯವಸ್ಥೆಯಲ್ಲಿ ದೋಷ ಉಂಟಾಗಿ ಕತ್ತಲು ಆವರಿಸಿತ್ತು.

‘ತಾಂತ್ರಿಕ ತಜ್ಞರ ತಂಡಗಳು ವಿದ್ಯುತ್ ಸರಬರಾಜನ್ನು ಸಂಪೂರ್ಣವಾಗಿ ಮರು ಸ್ಥಾಪಿಸಲು ಪ್ರಯತ್ನಿಸುತ್ತಿವೆ’ ಎಂದು ಪಾಕಿಸ್ತಾನದ ಇಂಧನ ಸಚಿವ ಒಮರ್ ಅಯೂಬ್ ಖಾನ್ ಅವರು ತಿಳಿಸಿದರು.

‘ಕರಾಚಿ, ರಾವಲ್ಪಿಂಡಿ, ಲಾಹೋರ್‌, ಇಸ್ಲಾಮಾಬಾದ್‌, ಮುಲ್ತಾನ್‌, ಫೈಜಲ್‌ಬಾದ್‌ ಸೇರಿದಂತೆ ಹಲವು ಭಾಗಗಳಲ್ಲಿ ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಸರಬರಾಜು ಮರು ಸ್ಥಾಪಿಸಲಾಗಿದೆ. ಆದರೆ ಮೊದಲಿನಂತೆ ವಿದ್ಯುತ್‌ ಪೂರೈಕೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ’ ಎಂದು ಅವರು ಹೇಳಿದರು.

‘ಸಿಂಧ್ ಪ್ರಾಂತ್ಯದ ಗುಡ್ಡು ವಿದ್ಯುತ್ ಸ್ಥಾವರದಲ್ಲಿ ತಾಂತ್ರಿಕ ದೋಷದಿಂದಾಗಿ ಶನಿವಾರ ರಾತ್ರಿ 11: 41 ಕ್ಕೆ ವಿದ್ಯುತ್ ಸರಬರಾಜು ಕುಸಿದಿದೆ’ ಎಂದು ಒಮರ್ ಅಯೂಬ್ ಮತ್ತು ಮಾಹಿತಿ ಸಚಿವ ಶಿಬ್ಲಿ ಫರಾಜ್ ಮಾಧ್ಯಮದವರಿಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು