ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ ಪ್ರಬಲ ಭೂಕಂಪ; 120 ಮಂದಿಗೆ ಗಾಯ

Last Updated 14 ಫೆಬ್ರುವರಿ 2021, 6:37 IST
ಅಕ್ಷರ ಗಾತ್ರ

ಟೋಕಿಯೊ: ಈಶಾನ್ಯ ಜಪಾನಿನಲ್ಲಿ ಶನಿವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿದೆ. ಅಲ್ಲದೆ ಭೂ ಕಂಪನದಿಂದಾಗಿ ಬುಲೆಟ್ ರೈಲು ಮಾರ್ಗಗಳು ಮತ್ತು ಹಲವು ಕಟ್ಟಡಗಳು ಹಾನಿಗೊಳಗಾಗಿವೆ. ಹಲವೆಡೆ ವಿದ್ಯುತ್‌ ಕಡಿತವೂ ಆಗಿದೆ.

ಶನಿವಾರ ತಡರಾತ್ರಿ ಫುಕುಶಿಮಾ ಮತ್ತು ಮಿಯಾಗಿ ಪ್ರದೇಶದಲ್ಲಿ ಭೂ ಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 7.3ರಷ್ಟು ದಾಖಲಾಗಿದೆ.

‘ಈ ಭೂಕಂಪದಿಂದಾಗಿ 120 ಕ್ಕೂ ಹೆಚ್ಚು ಮಂದಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಯಾವುದೇ ಸಾವಿನ ಬಗ್ಗೆ ವರದಿಯಾಗಿಲ್ಲ’ ಎಂದು ಮುಖ್ಯ ಸಂಪುಟ ಕಾರ್ಯದರ್ಶಿ ಕತ್ಸುನೊಬು ಕಟು ಅವರು ತಿಳಿಸಿದರು.

‘ಸಮುದ್ರದ 55 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.ಇದರಿಂದಾಗಿ ಸುನಾಮಿ ಸಂಭವಿಸಿಲ್ಲ. ಭೂಕಂಪನದಿಂದ ಸ್ಥಗಿತಗೊಂಡಿದ್ದ ವಿದ್ಯುತ್‌‌ ಸರಬರಾಜನ್ನು ಭಾನುವಾರ ಮರು ಸ್ಥಾಪಿಸಲಾಗಿದೆ. ಆದರೆ ಬುಲೆಟ್‌ ರೈಲು ಸೇವೆಗಳನ್ನು ಸೋಮವಾರದ ತನಕ ಸ್ಥಗಿತಗೊಳಿಸಲಾಗಿದೆ’ ಎಂದು ಜಪಾನಿನ ಪೂರ್ವ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT