ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಖಾಸಗಿ ನಿವಾಸ ಮತ್ತು ಕಚೇರಿಯ ಗ್ಯಾರೇಜ್‌ನಲ್ಲಿ ಪತ್ತೆಯಾದ ಕೆಲವು ವರ್ಗೀಕೃತ ಕಡತಗಳು ಮತ್ತು ರಹಸ್ಯ ಕಾಗದಪತ್ರಗಳ ಕುರಿತು ತನಿಖೆ ನಡೆಸಲು ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ರಾಬರ್ಟ್ ಹರ್ ಅವರನ್ನು ವಿಶೇಷ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
ಈ ಗೋಪ್ಯ ಕಾಗದಪತ್ರಗಳಲ್ಲಿ ಏನಿದೆ ಎನ್ನುವುದು ಬೈಡನ್ ಅವರಿಗೆ ತಿಳಿದಿಲ್ಲ. ಈ ಕಡತಗಳ ವಿಚಾರವನ್ನು ಬೈಡನ್ ಅವರು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಶ್ವೇತಭವನ ಹೇಳಿದೆ.
ವಾಷಿಂಗ್ಟನ್ ಡಿ.ಸಿಯ ಪೆನ್ ಬೈಡನ್ ಸೆಂಟರ್ ಮತ್ತು ಡೆಲಾವರ್‌ನ ವಿಲ್ಮಿಂಗ್ಟನ್‌ನಲ್ಲಿರುವ ಬೈಡೆನ್ ಖಾಸಗಿ ನಿವಾಸದಲ್ಲಿ ವರ್ಗೀಕೃತ ದಾಖಲೆಗಳು ಪತ್ತೆಯಾದ ನಂತರ ಭುಗಿಲೆದ್ದ ರಾಜಕೀಯ ಕೋಲಾಹಲದ ನಡುವೆ ಶ್ವೇತಭವನವು ಬೈಡನ್ ಅವರ ಬೆಂಬಲಕ್ಕೆ ನಿಂತಿದೆ.
‘ಅಮೆರಿಕದ ಜನ ವರ್ಗೀಕೃತ ದಾಖಲೆಗಳು ಮತ್ತು ಮಾಹಿತಿಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆಂದು ಬೈಡನ್ ಹೇಳಿರುವುದು ಬಹಳ ಮುಖ್ಯ. ಇದು ಅವರಿಗೂ ಅಚ್ಚರಿ ಉಂಟು ಮಾಡಿದೆ. ಹಾಗಾಗಿಯೇ ತನಿಖೆಗೆ ವಹಿಸಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.