ಬುಧವಾರ, ನವೆಂಬರ್ 25, 2020
18 °C

ಟ್ರಂಪ್‌ ಪ್ರಚಾರ ವೆಬ್‌ಸೈಟ್‌ ಹ್ಯಾಕ್‌

ಪಿಟಿಐ: Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಒಂದು ವಾರವಷ್ಟೇ ಬಾಕಿ ಉಳಿದಿದ್ದು, ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರ ವೆಬ್‌ಸೈಟ್‌ ಮಂಗಳವಾರ ಹ್ಯಾಕ್‌ ಆಗಿದೆ.

‘30 ನಿಮಿಷ ವೆಬ್‌ಸೈಟ್‌ ಹ್ಯಾಕ್‌ ಆಗಿತ್ತು’ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ‘ವೆಬ್‌ಸೈಟ್‌ ಅನ್ನು ಹ್ಯಾಕರ್‌ಗಳು ಅಳಿಸಿ ಹಾಕಿದ್ದಾರೆ’ ಎಂದು ಪ್ರಕಟಣೆಯಲ್ಲಿ ಟ್ರಂಪ್‌ ಅವರ ಪ್ರಚಾರದ ವಕ್ತಾರ ಟಿಮ್‌ ಮುರ್ಟಫ್‌ ತಿಳಿಸಿದ್ದಾರೆ.

‘ಹ್ಯಾಕರ್‌ಗಳ ಪತ್ತೆಗೆ ತನಿಖೆ ಆರಂಭವಾಗಿದೆ. ಯಾವುದೇ ಸೂಕ್ಷ್ಮ ಮಾಹಿತಿಯು ಸೋರಿಕೆಯಾಗಿಲ್ಲ. ಏಕೆಂದರೆ ಇವುಗಳನ್ನು ವೆಬ್‌ಸೈಟ್‌ನಲ್ಲಿ ನಾವು ಸಂಗ್ರಹಿಸಿಡುವುದಿಲ್ಲ. ಇದೀಗ ವೆಬ್‌ಸೈಟ್‌ ಯತಾಸ್ಥಿತಿಯಲ್ಲಿದೆ’ ಎಂದು ಟಿಮ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು