ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಪ್ರೊ.ವಿಮಲ್ ಪಟೇಲ್ ಆಯ್ಕೆ

Last Updated 13 ನವೆಂಬರ್ 2021, 7:01 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕುಲಪತಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಸದಸ್ಯ ಪ್ರಾಧ್ಯಾಪಕ ವಿಮಲ್ ಪಟೇಲ್ ಅವರು ಅಂತರರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಪಟೇಲ್ ಅವರ ಅಧಿಕಾರಾವಧಿ ಜ.1, 2023ರಿಂದ ಐದು ವರ್ಷಗಳಾಗಿದೆ. ವಿಶ್ವಸಂಸ್ಥೆಯಲ್ಲಿ ನಡೆದ ಕಠಿಣ ಸ್ಪರ್ಧೆಯಲ್ಲಿ ಆಯ್ಕೆ ನಡೆಯಿತು. 8 ಸ್ಥಾನಗಳಿಗೆ ನಡೆದ ಚನಾವಣೆಗೆ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಸಮೂಹದಿಂದ 11 ಅಭ್ಯರ್ಥಿಗಳು ಕಣದಲ್ಲಿದ್ದರು.

51ರ ಹರೆಯದ ಪಟೇಲ್‌ ಅವರು 163 ಮತ ಪಡೆದರು. ಏಷ್ಯಾ–ಪೆಸಿಫಿಕ್ ಸಮೂಹದಲ್ಲಿರುವ ಚೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ 192 ರಾಷ್ಟ್ರಗಳ ಸದಸ್ಯರು ಮತದಾನ ಮಾಡಿದರು.

ವಿಮಲ್ ಪಟೇಲ್ ಅವರಿಗೆ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಟಿ.ಎಸ್.ತಿರುಮೂರ್ತಿ ಅಭಿನಂದಿಸಿದ್ದಾರೆ. ಟ್ವೀಟ್‌ ಮಾಡಿರುವ ಅವರು, ‘ಅಂತರರಾಷ್ಟ್ರೀಯ ಕಾನೂನು ಆಯೋಗಕ್ಕೆ ಆಯ್ಕೆಯಾಗಲು, ಏಷ್ಯಾ ಪೆಸಿಫಿಕ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ವಿಮಲ್ ಪಟೇಲ್ ಅವರಿಗೆ ಅಭಿನಂದನೆಗಳು. ಬೆಂಬಲಿಸಿದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಪಟೇಲ್‌ ಅವರು 163 ಮತ ಪಡೆದು ಮೊದಲಿಗರಾದರೆ ನಂತರದ ಸ್ಥಾನದಲ್ಲಿ ಥೈಲ್ಯಾಂಡ್ 162, ಜಪಾನ್ 154, ವಿಯೆಟ್ನಾಂ ಪ್ರತಿನಿಧಿ 145 ಮತ ಪಡೆದರು. ಚೀನಾ ಪ್ರತಿನಿಧಿ 142, ದಕ್ಷಿಣ ಕೊರಿಯ ಪ್ರತಿನಿಧಿ 140 ಮತ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT