ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸೇವೆಗೆ ಸಿದ್ಧ', 'ಸದಾ ಜನರಿಗಾಗಿ'–ಕಮಲಾ ಹ್ಯಾರಿಸ್

Last Updated 21 ಜನವರಿ 2021, 2:20 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಮೊದಲ ಉಪಾಧ್ಯಕ್ಷೆಯಾಗಿ ಪದಗ್ರಹಣ ಮಾಡಿರುವ ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್, 'ಸೇವೆಗೆ ಸಿದ್ಧ' ಮತ್ತು 'ಸದಾ ಜನರಿಗಾಗಿ' ಇರುವುದಾಗಿ ತಿಳಿಸಿದರು.

ಬುಧವಾರ ಕ್ಯಾಪಿಟಲ್ ಬಿಲ್ಡಿಂಗ್‌ನ ವೆಸ್ಟ್ ಫ್ರಂಟ್‌ನಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ 56 ವರ್ಷದ ಕಮಲಾ ಹ್ಯಾರಿಸ್ ಅಮೆರಿಕದ 46ನೇ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ತಮಿಳುನಾಡಿನ ಚೆನ್ನೈನಿಂದ ಅಮೆರಿಕಕ್ಕೆ ವಲಸೆ ಹೋದ ಭಾರತೀಯ ಕುಟುಂಬದ ಮಗಳಾಗಿರುವ ಕಮಲ ಹ್ಯಾರಿಸ್ ಅಮೆರಿಕದ 'ಮೊದಲ ಮಹಿಳಾ ಉಪಾಧ್ಯಕ್ಷೆ'ಯಾಗುವ ಮೂಲಕ ಇತಿಹಾಸ ರಚಿಸಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕದ ಉಪಾಧ್ಯಕ್ಷೆ ಸ್ಥಾನ ವಹಿಸುತ್ತಿರುವ 'ದಕ್ಷಿಣ ಏಷ್ಯಾದ ಮೊದಲ ಮಹಿಳಾ ಉಪಾಧ್ಯಕ್ಷೆ' ಮತ್ತು 'ಮೊದಲ ಕಪ್ಪುವರ್ಣೀಯ' ಎಂಬ ಹಿರಿಮೆಗೂ ಪಾತ್ರವಾಗಿದ್ದಾರೆ.

ಕಮಲಾ ದೇವಿ ಹ್ಯಾರಿಸ್ ಎಂಬ ನಾನು ದೇಶಿ ಹಾಗೂ ವಿದೇಶಿ ಶತ್ರುಗಳಿಂದ ಅಮೆರಿಕ ಸಂವಿಧಾನವನ್ನು ರಕ್ಷಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ. ಇದಕ್ಕಾಗಿ ನಿಜವಾದ ನಂಬಿಕೆ ಹಾಗೂ ನಿಷ್ಠೆಯನ್ನು ಹೊಂದಿರುತ್ತೇನೆ. ಈ ಕರ್ತ್ಯವ್ಯವನ್ನು ಮುಕ್ತವಾಗಿ ಮತ್ತು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಕೈಗೊಂಡರು.

ಬಳಿಕ ಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್, 'ಸೇವೆಗೆ ಸಿದ್ಧ', 'ಸದಾ ಜನರಿಗಾಗಿ' ಎಂದು ತಿಳಿಸಿದರು. ಮಗದೊಂದು ಟ್ವೀಟ್‌ನಲ್ಲಿ ನನಗಿಂತ ಮೊದಲು ಬಂದಿರುವ ಮಹಿಳೆಯ ಕಾರಣ ಇಂದು ನಾನು ಇಲ್ಲಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT