ಬುಧವಾರ, ನವೆಂಬರ್ 25, 2020
24 °C

2021ಕ್ಕೆ ಸಾಮೂಹಿಕ ಕೋವಿಡ್‌ ಲಸಿಕೆ –ರಷ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ: 2021ರ ವೇಳೆಗೆ ರಷ್ಯಾದಲ್ಲಿ ಸಾಮೂಹಿಕ ಕೋವಿಡ್ ಲಸಿಕೆ ಹಾಕಲಾಗುವುದು ಎಂದು ಇಲ್ಲಿನ ಸ್ಥಳೀಯ  ಮಾಧ್ಯಮಗಳು ವರದಿ ಮಾಡಿವೆ. 

ಕೋವಿಡ್‌ ಲಸಿಕೆಯು ರಷ್ಯಾ ಪ್ರಜೆಗಳಿಗೆ ಉಚಿತವಾಗಿರುತ್ತದೆ. ವೈದ್ಯಕೀಯ ಸಿಬ್ಬಂದಿಗಳು, ಶಿಕ್ಷಣ, ಸಾರಿಗೆ ಹಾಗೂ ಪೊಲೀಸರು ಹಾಗೂ ಜನರ ಸಂಪರ್ಕಕ್ಕೆ ಬರುವಂತಹ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೊದಲು ಲಸಿಕೆ ಹಾಕಲಾಗುವುದು ಎಂದು ರಷ್ಯಾ ಸರ್ಕಾರ ಪ್ರಕಟಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2020ರ ಡಿಸೆಂಬರ್‌ ಅಂತ್ಯಕ್ಕೆ ಸಾಮೂಹಿಕ ಲಸಿಕೆ ಅಭಿಯಾನ ಆರಂಭವಾಗುವ ನಿರೀಕ್ಷೆ ಇದೆ.  ರಷ್ಯಾದಲ್ಲಿ ತಯಾರಿಸಲಾಗಿರುವ ಎಪಿವ್ಯಾಕ್ ಕೊರೊನಾ ಲಸಿಕೆಯು ಪರಿಣಾಮಕಾರಿಯಾಗಿದೆ ಎಂದು ರಷ್ಯಾ ಸರ್ಕಾರದ ಸುದ್ದಿ ಸಂಸ್ಥೆ ವೆಕ್ಟರ್ ಸೆಂಟರ್ ವರದಿ ಮಾಡಿದೆ.

ಈ ಲಸಿಕೆಯು SAARS-CoV-2 ವೈರಸ್‌ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸುಮಾರು 40 ಸಾವಿರ ಜನರ ಮೇಲೆ ಪ್ರಯೋಗ ಮಾಡಲಾಗುವುದು ಎಂದು ರಷ್ಯಾ ಸರ್ಕಾರ ತಿಳಿಸಿದೆ.

ಕಳೆದ ತಿಂಗಳು ರಷ್ಯಾದಲ್ಲಿ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ್ದ ಪುಟಿನ್, ದೇಶದಲ್ಲಿ ತಯಾರಾಗುತ್ತಿರುವ ಎಲ್ಲಾ Covid-19 ಪ್ರಾಯೋಗಿಕ ಲಸಿಕೆಗಳು ಪರಿಣಾಮಕಾರಿಯಾಗಿದ್ದು ಈ ವರ್ಷದ ಅಂತ್ಯದೊಳಗೆ ಸಾಮೂಹಿಕ ಲಸಿಕೆಗಳನ್ನು ಪ್ರಾರಂಭಿಸುವ ಭರವಸೆ ಇದೆ ಎಂದು ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು