ಭಾನುವಾರ, ಅಕ್ಟೋಬರ್ 24, 2021
25 °C

ತಾಲಿಬಾನ್‌ ಮೇಲೆ ರಷ್ಯಾ, ಚೀನಾ, ಪಾಕ್‌, ಅಮೆರಿಕ ನಿಗಾ: ರಷ್ಯಾ

ಎಪಿ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಅಫ್ಗಾನಿಸ್ತಾನದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್‌ ತನ್ನ ಭರವಸೆಗಳನ್ನು ಉಳಿಸಿಕೊಳ್ಳುವಂತೆ ನೋಡಿಕೊಳ್ಳುವುದಕ್ಕಾಗಿ ರಷ್ಯಾ, ಚೀನಾ, ಪಾಕಿಸ್ತಾನ ಮತ್ತು ಅಮೆರಿಕ ಜತೆಯಾಗಿ ಕೆಲಸ ಮಾಡುತ್ತಿವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್‌ ಲಾವ್ರೊವ್‌ ಹೇಳಿದ್ದಾರೆ. ಎಲ್ಲ ವರ್ಗಗಳಿಗೂ ಸರ್ಕಾರದಲ್ಲಿ ಪ್ರಾತಿನಿಧ್ಯ ಮತ್ತು ಭಯೋತ್ಪಾದನೆ ಎಲ್ಲೆಡೆ ಹರಡದಂತೆಯೂ ಈ ದೇಶಗಳು ಒಟ್ಟಾಗಿ ಕ್ರಮ ಕೈಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ. 

ಈ ದಿಸೆಯಲ್ಲಿ ನಾಲ್ಕು ದೇಶಗಳು ಒಪ್ಪಂದ ಮಾಡಿಕೊಂಡಿವೆ. ರಷ್ಯಾ, ಚೀನಾ, ಪಾಕಿಸ್ತಾನದ ಪ್ರತಿನಿಧಿಗಳು ಇತ್ತೀಚೆಗಷ್ಟೇ ಕತಾರ್‌ಗೆ ತೆರಳಿದ್ದರು. ಅಲ್ಲಿಂದ ಅವರು ಅಫ್ಗಾನಿಸ್ತಾನದ ಕಾಬೂಲ್‌ಗೆ ಭೇಟಿ ನೀಡಿದ್ದರು. ತಾಲಿಬಾನ್‌ ಪ್ರತಿನಿಧಿಗಳು ಮತ್ತು ಪದಚ್ಯುತಗೊಂಡ ಸರ್ಕಾರದ ಸಮಾಲೋಚನಾ ಮಂಡಳಿಯ ಪ್ರತಿನಿಧಿಗಳಾದ ಮಾಜಿ ಅಧ್ಯಕ್ಷ ಹಮೀದ್‌ ಕರ್ಜೈ ಮತ್ತು ಅಬ್ದುಲ್ಲ ಅಬ್ದುಲ್ಲ ಅವರ ಜೊತೆ ಚರ್ಚೆ ನಡೆಸಿದರು ಎಂದು ಅವರು ಹೇಳಿದರು.

1996ರಿಂದ 2001ರ ವರೆಗೆ ನೀಡಿದ ಆಡಳಿತಕ್ಕಿಂತ ಭಿನ್ನವಾದ ಆಡಳಿತ ನೀಡುವುದಾಗಿ ತಾಲಿಬಾನ್‌ ಭರವಸೆ ನೀಡಿತ್ತು. ಆದರೆ, ಮಹಿಳೆ ಮತ್ತು ಹೆಣ್ಣು ಮಕ್ಕಳ ವಿಚಾರದಲ್ಲಿ ತನ್ನ ಹಿಂದಿನ ದಮನಕಾರಿ ನೀತಿಯನ್ನು ತಾಲಿಬಾನ್‌ ಪ್ರಯೋಗಿಸುತ್ತಿದೆ ಎಂದು ಇತ್ತೀಚಿನ ಬೆಳವಣಿಗೆಗಳಿಂದ ತಿಳಿದುಬಂದಿದೆ. ತಾಲಿಬಾನ್‌ ನೀಡಿದ್ದ ಭರವಸೆಗಳನ್ನು ಉಳಿಸಿಕೊಳ್ಳುವಂತೆ ಮಾಡುವುದು ಸದ್ಯದ ಪ್ರಮುಖ ಕೆಲಸ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು