ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಗಡಿಯಲ್ಲಿರುವ ಕಟ್ಟಡವೊಂದರ ಮೇಲೆ ಶೆಲ್ ದಾಳಿ; ರಷ್ಯಾ ಆರೋಪ

Last Updated 19 ಫೆಬ್ರುವರಿ 2022, 14:39 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್ ಗಡಿಗೆ ಸಮೀಪದಲ್ಲಿರುವ ಹಳ್ಳಿಯೊಂದರ ಕಟ್ಟಡದ ಮೇಲೆಶೆಲ್ ದಾಳಿ ನಡೆದಿದೆ. ಇದರಿಂದಾಗಿ ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ ಎಂದು ರಷ್ಯಾ ಆರೋಪಿಸಿದೆ.

ಈ ಮಾಹಿತಿಯನ್ನು ರಷ್ಯಾದ ನೈರುತ್ಯ ಭಾಗದಲ್ಲಿರುವ ಸ್ಥಳೀಯ ಆಡಳಿತ ಖಚಿತಪಡಿಸಿರುವುದಾಗಿ TASS ಸುದ್ದಿ ಸಂಸ್ಥೆ ವರದಿ ಮಾಡಿದೆ.ಆದರೆ, ರಷ್ಯಾದ ಆರೋಪವನ್ನು ಉಕ್ರೇನ್ ಅಲ್ಲಗಳೆದಿದೆ.

'ರಷ್ಯಾದ ಪ್ರದೇಶದಲ್ಲಿ ಉಕ್ರೇನ್ ಶೆಲ್ ದಾಳಿ ನಡೆಸಿದೆ ಎಂಬುದು ಸುಳ್ಳು ಸುದ್ದಿ. ಸರ್ಕಾರದ ಪಡೆಗಳು ದಾಳಿ ನಡೆಸಿಲ್ಲ. ಪರಿಸ್ಥಿತಿಈಗಾಗಲೇ ಬಿಗಡಾಯಿಸಿದೆ. ಅದನ್ನು ಮತ್ತಷ್ಟುಉದ್ವಿಗ್ನಗೊಳಿಸುವ ಆಸಕ್ತಿ ನಮಗಿಲ್ಲ' ಎಂದು ಉಕ್ರೇನ್ ಸ್ಪಷ್ಟಪಡಿಸಿರುವುದಾಗಿ ರಾಯಿಟರ್ಸ್‌ ತಿಳಿಸಿದೆ.

ಉಕ್ರೇನ್ ಅನ್ನು ಆಕ್ರಮಿಸಲು ರಷ್ಯಾ ಯೋಜಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ಎಚ್ಚರಿಕೆ ನೀಡಿರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT