ಉಕ್ರೇನ್ ಮೇಲೆ ರಷ್ಯಾ ವ್ಯಾಪಕ ದಾಳಿ; 11 ಮಂದಿ ಸಾವು

ಕೀವ್: ಉಕ್ರೇನ್ ಮೇಲೆ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ಮತ್ತು ಸ್ವಯಂ ಸ್ಫೋಟಿಸುವ ಡ್ರೋನ್ ದಾಳಿಗೆ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ಸ್ಟೇಟ್ ಎಮರ್ಜನ್ಸಿ ಸರ್ವಿಸ್ ವರದಿ ಮಾಡಿದೆ.
ಈ ದಾಳಿಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.
ಅಮೆರಿಕ, ಜರ್ಮನಿ ಅತ್ಯಾಧುನಿಕ ಯುದ್ಧ ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ಪೂರೈಸುವುದಾಗಿ ಘೋಷಿಸಿದ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸಿದೆ.
ಇದನ್ನೂ ಓದಿ: ಉಕ್ರೇನ್ ಸೇನಾ ಬತ್ತಳಿಕೆಗೆ ಅತ್ಯಾಧುನಿಕ ‘ಅಬ್ರಾಮ್ಸ್’ ಯುದ್ಧ ಟ್ಯಾಂಕ್
ಕೀವ್ ನಗರವನ್ನು ಗುರಿಯಾಗಿಸಿ ರಷ್ಯಾ ಆಕ್ರಮಣವನ್ನುನಡೆಸಿದೆ. ಇಲ್ಲಿ ಉಕ್ರೇನ್ ವಾಯು ರಕ್ಷಣೆ ವ್ಯವಸ್ಥೆಯು, ರಷ್ಯಾದ 15 ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.
ಒಟ್ಟಾರೆಯಾಗಿ ರಷ್ಯಾ ನಡೆಸಿದ 55 ಕ್ಷಿಪಣಿಗಳ ಪೈಕಿ 47 ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸಶಸ್ತ್ರ ಪಡೆಯ ಕಮಾಂಡರ್ ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.