ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ಉಗ್ರರು ನಿರಾಶ್ರಿತರ ಸೋಗಿನಲ್ಲಿ ರಷ್ಯಾಕ್ಕೆ ಬರುವುದು ಬೇಡ: ಪುಟಿನ್‌

Last Updated 22 ಆಗಸ್ಟ್ 2021, 11:45 IST
ಅಕ್ಷರ ಗಾತ್ರ

ಮಾಸ್ಕೋ: ‘ಅಫ್ಗಾನಿಸ್ತಾನದಲ್ಲಿನ ಸಂಘರ್ಷವು ನೇರವಾಗಿ ರಷ್ಯಾದ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ಹೇಳಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ನೆರೆಯ ಮಧ್ಯ ಏಷ್ಯಾ ದೇಶಗಳಿಗೆ ಅಫ್ಗಾನಿಸ್ತಾನದನಿರಾಶ್ರಿತರನ್ನು ಸ್ಥಳಾಂತರ ಮಾಡುವ ಕೆಲ ಪಾಶ್ಚಾತ್ಯ ರಾಷ್ಟ್ರಗಳ ಪ್ರಸ್ತಾವವನ್ನು ಪುಟಿನ್‌ ಟೀಕಿಸಿದ್ದಾರೆ.

‘ಅಫ್ಗನ್‌ ಉಗ್ರರು ನಿರಾಶ್ರಿತರ ಸೋಗಿನಲ್ಲಿ ರಷ್ಯಾಕ್ಕೆ ಬರುವುದನ್ನು ನಾನು ಬಯಸುವುದಿಲ್ಲ,’ ಎಂದು ಪುಟಿನ್‌ ಹೇಳಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆ ‘ಆರ್‌ಐಎ’ ವರದಿ ಮಾಡಿದೆ.

ಅಫ್ಗಾನಿಸ್ತಾನದಲ್ಲಿನ ಪಾಶ್ಚಾತ್ಯ ರಾಷ್ಟ್ರಗಳ ಹಸ್ತಕ್ಷೇಪವನ್ನು ಪುಟಿನ್‌ ಆರಂಭದಿಂದಲೂ ವಿರೋಧಿಸಿದ್ದಾರೆ.

ಗಿರಿ ಕಂದರಗಳ ರಾಷ್ಟ್ರ ಅಫ್ಗನ್‌ನಲ್ಲಿ ನಿಯೋಜಿಸಿದ್ದ ತನ್ನ ಭದ್ರತಾ ಪಡೆಗಳನ್ನು ಅಮೆರಿಕ ಹಿಂದಕ್ಕೆ ಪಡೆಯುತ್ತಿದೆ. ಹೀಗಾಗಿ ದೇಶದಲ್ಲಿ ಮೇಲುಗೈ ಸಾಧಿಸಿರುವ ತಾಲಿಬಾನ್‌, ಅಲ್ಲಿನ ಸರ್ಕಾರವನ್ನು ಉರುಳಿಸಿ, ತನ್ನ ಆಡಳಿತ ಘೋಷಿಸಿಕೊಂಡಿದೆ. ಜತೆಗೆ, ಶರಿಯಾ ಕಾನೂನಿನ ಅಡಿಯಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವುದಾಗಿ ಹೇಳಿದೆ. ತಾಲಿಬಾನ್‌ ಕಠಿಣ ಆಡಳಿತದ ಭೀತಿಯಿಂದ ಹಲವರು ದೇಶ ತೊರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT