ಮಂಗಳೂರು: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ವಿದೇಶಿ ಉದ್ಯೋಗಿಗಳ ಸ್ಪಾನ್ಸರ್‌ಶಿಪ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ. ನೂತನ ಕಾರ್ಮಿಕ ಸುಧಾರಣೆಗಳು 2021 ಮಾರ್ಚ್‌ನಲ್ಲಿ ಜಾರಿಗೆ ಬರಲಿವೆ ಎಂದು ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಉಪ ಸಚಿವ ಅಬ್ದುಲ್ಲಾ ಬಿನ್ ನಾಸಿರ್ ಅಬುತ್ನಯನ್ ಬುಧವಾರ ತಿಳಿಸಿದ್ದಾರೆ.

ವಿದೇಶಿ ವಲಸೆ ಕಾರ್ಮಿಕರನ್ನು ಉದ್ಯೋಗದಾತರು ಶೋಷಣೆ ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿವೆ. ಇದಕ್ಕಾಗಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ವಲಸೆ ಕಾರ್ಮಿಕರನ್ನು, ಅವರ ಉದ್ಯೋಗದಾತರ ಬಳಿಯೇ ಹಿಡಿದಿಡುವ ಹಲವು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.

ವಿದೇಶಿ ವಲಸೆ ಕಾರ್ಮಿಕರು ತಮ್ಮ ಸ್ಪಾನ್ಸರ್‌ಶಿಪ್ ಅನ್ನು ಒಬ್ಬ ಉದ್ಯೋಗದಾತನಿಂದ ಇನ್ನೊಬ್ಬ ಉದ್ಯೋಗದಾತನಿಗೆ ವರ್ಗಾಯಿಸುವ ಮೂಲಕ ಬೇರೆ ಕಡೆ ಕೆಲಸ ಮಾಡಬಹುದಾಗಿದೆ. ತಮ್ಮ ಅಲ್ಲಿಗೆ ಮತ್ತೆ ಪ್ರವೇಶ ಮಾಡಬಹುದಾಗಿದೆ. ಅಂತಿಮ ನಿರ್ಗಮನ ವೀಸಾಗಳನ್ನೂ ಪಡೆಯಬಹುದಾಗಿದೆ. ಈ ಸುಧಾರಣೆಗಳ ಲಾಭವನ್ನು ಸೌದಿ ಅರೇಬಿಯಾದಲ್ಲಿರುವ ಸುಮಾರು ಒಂದು ಕೋಟಿ ವಿದೇಶಿ ಉದ್ಯೋಗಿಗಳು ಪಡೆಯಲಿದ್ದಾರೆ.

ಕತಾರ್ ಕೂಡ ಇತ್ತೀಚೆಗೆ ತನ್ನ ಕಾರ್ಮಿಕ ಕಾನೂನುಗಳಲ್ಲಿ ಇಂಥದ್ದೇ ಬದಲಾವಣೆಗಳನ್ನು ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.