‘ನಾನಿನ್ನೂ ತುಂಬಾ ಕೆಲಸ ಮಾಡಬೇಕಿದೆ’ ಎಂದ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್!
ಕಠ್ಮಂಡು: 70ರ ದಶಕದ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ನನ್ನು ನೇಪಾಳದ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ನಂತರ ಶೋಭರಾಜ್ ದೋಹಾ ಮಾರ್ಗವಾಗಿ ಶನಿವಾರ ಬೆಳಿಗ್ಗೆ ಫ್ಯಾರಿಸ್ ತಲುಪಿದ್ದಾನೆ.
ಫ್ಯಾರಿಸ್‌ಗೆ ಹೋಗುವ ವಿಮಾನವನ್ನು ಏರುವ ಮುನ್ನ ಕಠ್ಮಂಡುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಶೋಭರಾಜ್, ‘ನಾನೊಬ್ಬ ಅಮಾಯಕ’ ಎಂದು ಹೇಳಿಕೊಂಡಿದ್ದಾನೆ.
‘ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ನಾನಿನ್ನು ತುಂಬಾ ಕೆಲಸ ಮಾಡಬೇಕಿದೆ. ನೇಪಾಳ ಸೇರಿದಂತೆ ಹಲವರ ಮೇಲೆ ನಾನು ಪ್ರಕರಣ ದಾಖಲಿಸಬೇಕಿದೆ ಎಂದು ಹೇಳಿಕೊಂಡಿದ್ದಾನೆ. ನನ್ನನ್ನು ಸರಣಿ ಹಂತಕ ಎಂದು ತಪ್ಪಾಗಿ ಬಿಂಬಿಸಲಾಗಿದೆ‘ ಎಂದು ಆತ ಹೇಳಿಕೊಂಡಿದ್ದಾನೆ.
78 ವರ್ಷದ ಶೋಭರಾಜ್‌ನನ್ನು ಬಿಡುಗಡೆ ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆದೇಶ ಹೊರಡಿಸಿತ್ತು.
ಇಬ್ಬರು ಉತ್ತರ ಅಮೆರಿಕ ಪ್ರವಾಸಿಗರನ್ನು ಹತ್ಯೆ ಮಾಡಿದ ಆರೋಪದಲ್ಲಿ 2003ರಿಂದ ಈತ ನೇಪಾಳ ಜೈಲಿನಲ್ಲಿ ಇದ್ದ. ಅನಾರೋಗ್ಯ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ನ್ಯಾಯಾಲಯ ಆದೇಶ ನೀಡಿತ್ತು.
ನಕಲಿ ಪಾಸ್‌ಪಾರ್ಟ್ ಬಳಸಿ ನೇಪಾಳಕ್ಕೆ ಬಂದಿದ್ದ ಶೋಭರಾಜ್ 1975ರಲ್ಲಿ ಅಮೆರಿಕ ಹಾಗೂ ಕೆನಡಾ ಮೊಲದ ಇಬ್ಬರು ಪ್ರವಾಸಿಗರನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶೋಭರಾಜ್‌ಗೆ ನೇಪಾಳ ಸುಪ್ರೀಂ ಕೋರ್ಟ್ ದೋಷಿ ಎಂದು ಗುರುತಿಸಿ ಶಿಕ್ಷೆ ವಿಧಿಸಿತ್ತು. ಹತ್ಯೆ ಮಾಡಿದ್ದಕ್ಕೆ 20 ವರ್ಷ ಜೈಲು ಹಾಗೂ ನಕಲಿ ಪಾಸ್‌ಪೋರ್ಟ್ ಬಳಸಿದ್ದಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಹರಳುಗಳ ವ್ಯಾಪಾರಿ ಎಂದು ಹೇಳಿಕೊಂಡು ಶೋಭರಾಜ್ ಮಹಿಳಾ ಪ್ರವಾಸಿಗರನ್ನು ಸೆಳೆದು ಅವರಿಗೆ ಡ್ಸಗ್ಸ್ ನೀಡಿ ಕೊಲೆ ಮಾಡುತ್ತಿದ್ದ. ಆ ಬಳಿಕ ಆತನಿಗೆ ಬಿಕಿನಿ ಕಿಲ್ಲರ್ ಎಂದು ಹೆಸರು ಬಂದಿತ್ತು. ಈತನ ತಂದೆ ಭಾರತೀಯ ಮೂಲ ಹಾಗೂ ತಾಯಿ ವಿಯೇಟ್ನಾಂ ಮೂಲದವರಾಗಿ ಫ್ರಾನ್ಸ್‌ನಲ್ಲಿ ನೆಲೆ ನಿಂತಿದ್ದರು.
ದೆಹಲಿ ಪ್ರವೇಶಿಸಿದ ಭಾರತ್ ಜೋಡೊ ಯಾತ್ರೆ: ರಾಹುಲ್ಗೆ ಅದ್ಧೂರಿ ಸ್ವಾಗತ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.