ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಗುಂಡಿನ ದಾಳಿ ಮತ್ತು ಕಾಲ್ತುಳಿತದಲ್ಲಿ ಹಲವರ ಸಾವು

Last Updated 19 ಆಗಸ್ಟ್ 2021, 10:25 IST
ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದ ಅಸಾದಾಬಾದ್‌ನಲ್ಲಿ ನಡೆಯುತ್ತಿದ್ದ ರ್‍ಯಾಲಿ ವೇಳೆ ತಾಲಿಬಾನ್ ಉಗ್ರರು ನಡೆಸಿದ ಗುಂಡಿನ ದಾಳಿ ಮತ್ತು ಕಾಲ್ತುಳಿತದಲ್ಲಿ ಹಲವರು ಸಾವನ್ನಪ್ಪಿದ್ದಾರೆ.

ಗುರುವಾರ ಸ್ವಾತಂತ್ರ್ಯೋತ್ಸವದ ರ್‍ಯಾಲಿಯಲ್ಲಿ ತಾಲಿಬಾನ್ ಉಗ್ರರು, ರಾಷ್ಟ್ರೀಯ ಧ್ವಜವನ್ನು ಬೀಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಇದೇ ರೀತಿಯ ಘಟನೆಯಲ್ಲಿ ನಿನ್ನೆ ಮೂವರು ಸಾವನ್ನಪ್ಪಿದ್ದರು.

ಮಾಧ್ಯಮಗಳ ಪ್ರಕಾರ, ಬಿಳಿ ತಾಲಿಬಾನ್ ಧ್ವಜಗಳನ್ನು ಕಿತ್ತುಹಾಕಿದ ಪ್ರತಿಭಟನಾಕಾರರು ಅಫ್ಘಾನ್ ಧ್ವಜವನ್ನು ಬೀಸುತ್ತಿದ್ದರು. ಇದರಿಂದ ಕೋಪಗೊಂಡ ತಾಲಿಬಾನಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ತಾಲಿಬಾನ್, ಅಫ್ಗಾನಿಸ್ತಾನವನ್ನು ವಶ‍ಪಡಿಸಿಕೊಂಡ ನಂತರ ಇದು ಜನರಿಂದ ವ್ಯಕ್ತವಾದ ಮೊದಲ ವಿರೋಧವಾಗಿದೆ.

‘ಮೊದಲಿಗೆ ನೂರಾರು ಜನರು ಬೀದಿಗೆ ಬಂದರು. ಅದನ್ನು ಕಂಡು ಹೆದರಿದ ನಾನು ಮುಂದೆ ಹೋಗಲಿಲ್ಲ. ಆದರೆ, ನನ್ನ ನೆರೆಹೊರೆಯವರೊಬ್ಬರು ಸೇರಿಕೊಂಡಿದ್ದನ್ನು ನೋಡಿದಾಗ ನಾನು ಮನೆಯಲ್ಲಿರುವ ಧ್ವಜವನ್ನು ಹೊರತೆಗೆದೆ‘ ಎಂದು ಪ್ರತ್ಯಕ್ಷದರ್ಶಿ ಮೊಹಮ್ಮದ್ ಸಲೀಮ್ ಹೇಳಿದ್ದಾರೆ.

‘ಕಾಲ್ತುಳಿತ ಮತ್ತು ತಾಲಿಬಾನಿಗಳ ಗುಂಡಿನ ದಾಳಿಯಲ್ಲಿ ಹಲವರು ಸಾವನ್ನಪ್ಪಿದರು. ಮತ್ತೆ ಕೆಲವರು ಗಾಯಗೊಂಡಿದ್ದಾರೆ‘ ಎಂದು ಅವರು ಹೇಳಿದ್ದಾರೆ.

ಆಫ್ಗಾನ್‌ನ ಪೂರ್ವ ನಗರ ಜಲಾಲಾಬಾದ್ ಮತ್ತು ಪಕ್ತಿಯಾ ಪ್ರಾಂತ್ಯದ ಜಿಲ್ಲೆಯಲ್ಲೂ ಪ್ರತಿಭಟನೆಗಳು ನಡೆದಿವೆ. ಆದರೆ, ಯಾವುದೇ ಗಂಭೀರ ಹಿಂಸಾಚಾರದ ವರದಿಗಳಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಫ್ಘಾನಿಸ್ತಾನವು ಆಗಸ್ಟ್ 19 ಅನ್ನು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ದಿನವನ್ನಾಗಿ ಆಚರಿಸುತ್ತದೆ.

ಬುಧವಾರ, ತಾಲಿಬಾನ್ ಹೋರಾಟಗಾರರು ಜಲಾಲಾಬಾದ್‌ನಲ್ಲಿ ಕಪ್ಪು, ಕೆಂಪು ಮತ್ತು ಹಸಿರು ರಾಷ್ಟ್ರೀಯ ಧ್ವಜವನ್ನು ಬೀಸಿದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದರು. ಘಟನೆಯಲ್ಲಿ, ಮೂವರು ಸಾವನ್ನಪ್ಪಿದ್ದಾರೆ ಎಂದು ಪ್ರಪ್ರತ್ಯಕ್ಷದರ್ಶಿಗಳು ಮತ್ತು ಮಾಧ್ಯಮಗಳ ವರದಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT