ಶುಕ್ರವಾರ, ಮೇ 20, 2022
19 °C

ಶಾಂಘೈ: 3ನೇ ವಾರಕ್ಕೆ ಕಾಲಿಟ್ಟ ಲಾಕ್‌ಡೌನ್

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಚೀನಾದ ಅತಿದೊಡ್ಡ ನಗರ ಶಾಂಘೈನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್‌ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ತೀವ್ರ ವಿರೋಧದ ನಡುವೆಯೂ ಸಹ ಕಠಿಣ ನಿರ್ಬಂಧಗಳನ್ನು ತೆರವುಗೊಳಿಸುವ ಕುರಿತು ಬುಧವಾರವು ಸ್ಪಷ್ಟ ಸೂಚನೆಗಳು ದೊರೆತಿಲ್ಲ.

2.5 ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿ 66 ಲಕ್ಷ ಮಂದಿಗೆ ಮನೆಯಿಂದ ಹೊರ ಬರಲು ಮಂಗಳವಾರದಿಂದ ಅನುಮತಿ ನೀಡಲಾಗಿದೆ. ಕೆಲವೆಡೆಯ ಮನೆಗಳಿಗೆ ತಡೆಗೋಡೆಗಳನ್ನು ಮುಚ್ಚಿ, ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ. 

ಓಮೈಕ್ರಾನ್‌ ಪ್ರಕರಣಗಳು ಹೆಚ್ಚಳವಾಗಿಲ್ಲ. ಸೋಂಕು ನಿಯಂತ್ರಣದಲ್ಲಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೂ ಕೋವಿಡ್‌ ನಿಯಂತ್ರಣ ಸಂಬಂಧ ಕೈಗೊಂಡಿರುವ ಕ್ರಮಗಳಿಂದ ನಿವಾಸಿಗಳು ಮೂರನೇ ವಾರವೂ ಲಾಕ್‌ಡೌನ್‌ನಲ್ಲಿ ದಿನಕಳೆಯುವಂತಾಗಿದೆ. ಅಲ್ಲದೆ ಆರ್ಥಿಕತೆ ಮೇಲೂ ಇದು ಪರಿಣಾಮ ಬೀರಿದೆ.

ಶಾಂಘೈನಲ್ಲಿ 26,338 ಹೊಸ ಪ್ರಕರಣಗಳು ವರದಿಯಾಗಿವೆ. ಕೋವಿಡ್‌ ಕೇಂದ್ರಗಳಲ್ಲಿ ವೈದ್ಯಕೀಯ ನಿಗಾದಲ್ಲಿದ್ದ 6,044  ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ.

ಭಾರತದ ಕಾನ್ಸುಲೇಟ್‌ ಕಚೇರಿಯ ಭೌತಿಕ ಸೇವೆ ಬಂದ್‌: ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಂಘೈನಲ್ಲಿರುವ ಭಾರತದ ಕಾನ್ಸುಲೇಟ್‌ ಕಚೇರಿಯು ಭೌತಿಕ ಸೇವೆಗಳನ್ನು ರದ್ದುಗೊಳಿಸಿದ್ದು, ತುರ್ತು ಸಂದರ್ಭದಲ್ಲಿ ಆನ್‌ಲೈನ್‌ ಅಥವಾ ದೂರ ಸಂಪರ್ಕದ ಮೂಲಕ ಸೇವೆ ಒದಗಿಸುವುದಾಗಿ ಪ್ರಕಟಿಸಿದೆ. ಚೀನಾ ಪೂರ್ವ ಪ್ರದೇಶದಲ್ಲಿರುವ ಭಾರತೀಯರು ಸೇವೆ ಪಡೆಯಲು ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿಕೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು