ಮಂಗಳವಾರ, ಸೆಪ್ಟೆಂಬರ್ 28, 2021
21 °C

ನಿಮಿಷದಲ್ಲಿ ಕೋವಿಡ್‌ ಪತ್ತೆ ಮಾಡುವ ಬ್ರೀಥ್‌ಲೈಸರ್ ಪರೀಕ್ಷೆಗೆ ಸಿಂಗಪುರ ಒಪ್ಪಿಗೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ‘ಕೋವಿಡ್‌–19 ‘ಬ್ರೀಥ್‌ಲೈಸರ್’ ಪರೀಕ್ಷೆಯನ್ನು ನಡೆಸಲು ಸಿಂಗಪುರದ ಅಧಿಕಾರಿಗಳು ತಾತ್ಕಾಲಿಕ ಅನುಮೋದನೆ ನೀಡಿದ್ದಾರೆ.

‘ಬ್ರೀಥ್‌ಲೈಸರ್’ ಪರೀಕ್ಷೆಯ ಮೂಲಕ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆಯೇ ಎಂಬುದರ ಬಗ್ಗೆ ಕೇವಲ ಒಂದು ನಿಮಿಷದಲ್ಲಿ ಪತ್ತೆ ಹಚ್ಚಬಹುದಾಗಿದೆ’ ಎಂದು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸ್ಥಳೀಯ ನವೋದ್ಯಮ ಸಂಸ್ಥೆಯೊಂದು ತಿಳಿಸಿದೆ.

‘ಬ್ರೀಥೋನಿಕ್ಸ್’ ಕಂಪನಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

‘ಸದ್ಯ ಮಲೇಷ್ಯಾದ ಗಡಿ ಭಾಗದಲ್ಲಿರುವ ನಗರವೊಂದರಲ್ಲಿ ಈ ತಂತ್ರಜ್ಞಾನದ ಪ್ರಯೋಗವನ್ನು ನಡೆಸುವ ಕುರಿತಾಗಿ ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸಲಾಗುತ್ತಿದೆ’ ಎಂದು ಕಂಪನಿ ಹೇಳಿದೆ.

ಈ ಉಸಿರಾಟದ ಪರೀಕ್ಷೆಯೊಂದಿಗೆ ಕಡ್ಡಾಯವಾಗಿ ಆ್ಯಂಟಿಜೆನ್ ರ್‍ಯಾಪಿಡ್ ಪರೀಕ್ಷೆಯನ್ನು ನಡೆಸಲಾಗುವುದು.

ಪ್ರಾಥಮಿಕ ಕ್ಲಿನಿಕಲ್ ಪ್ರಯೋಗದಲ್ಲಿ ಉಸಿರಾಟದ ಪರೀಕ್ಷೆಯು ಶೇಕಡ 90ಕ್ಕಿಂತ ಹೆಚ್ಚು ನಿಖರತೆಯನ್ನು ಸಾಧಿಸಿದೆ ಎಂದು ಕಂಪನಿ ಕಳೆದ ವರ್ಷ ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು