ಲಂಡನ್: ಈಗಾಗಲೇ ಕೋವಿಡ್ಗೆ ಒಳಗಾಗಿರುವ ವ್ಯಕ್ತಿಗಳಲ್ಲಿ ಪ್ರಬಲ ಪ್ತತಿಕಾಯ ಸೃಷ್ಟಿಯಾಗಲು ‘ಸ್ಪುಟ್ನಿಕ್ ವಿ’ ಲಸಿಕೆಯ ಒಂದೇ ಒಂದು ಡೋಸ್ ಸಾಕಾಗುತ್ತದೆ ಎಂಬ ಅಂಶವು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಸೆಲ್ ರಿಪೋರ್ಟ್ಸ್ ಮೆಡಿಸಿನ್ ನಿಯತಕಾಲಿಕದಲ್ಲಿ ಮಂಗಳವಾರ ಪ್ರಕಟವಾದ ಅಧ್ಯಯನದ ವರದಿಯಲ್ಲಿ ಇದನ್ನು ತಿಳಿಸಲಾಗಿದ್ದು, ಅರ್ಜೆಂಟೈನಾದಲ್ಲಿ 289 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಪ್ರಯೋಗಗಳ ವಿವರವನ್ನು ನೀಡಲಾಗಿದೆ.

ಎರಡು ಡೋಸ್ ಬದಲಿಗೆ ಒಂದೇ ಒಂದು ಡೋಸ್ ಹಾಕಿಸಿದರೆ ಪ್ರತಿಕಾಯ ಹೆಚ್ಚಬಹುದೇ ಎಂಬುದನ್ನು ತಿಳಿಯಲಿಕ್ಕಾಗಿಯೇ ಈ ಅಧ್ಯಯನ ನಡೆಸಲಾಗಿದೆ. ಮುಖ್ಯವಾಗಿ ಲಸಿಕೆ ಕೊರತೆಯ ಈ ಸನ್ನಿವೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಲಸಿಕೆ ಲಭಿಸುವಂತಾಗಬೇಕು, ಹೀಗಾಗಿ ಒಂದೇ ಡೋಸ್ ಲಸಿಕೆಯಲ್ಲೇ ಪ್ರತಿಕಾಯ ಬೆಳೆಯುತ್ತದೆಯೇ ಎಂಬುದನ್ನು ಗಮನಿಸವುದು ಅಧ್ಯಯನದ ಭಾಗವಾಗಿತ್ತು.

ಆಸ್ಟ್ರಾಜೆನಿಕಾ, ಮೊಡೆರ್ನಾ, ಫೈಝರ್ ಲಸಿಕೆಗಳನ್ನೂ ಅಧ್ಯಯನಕ್ಕೆ ಅಳವಡಿಸಲಾಗಿತ್ತು. ಈಗಾಗಲೇ ಕೋವಿಡ್ನಿಂದ ತೊಂದರೆಗೆ ಒಳಗಾದವರಿಗೆ ಆಸ್ಟ್ರಾಜೆನಿಕಾ ಲಸಿಕೆಯ ಮೊದಲ ಡೋಸ್ನ ಬಳಿಕ ಶೇ 76ರಷ್ಟು ಪ್ರತಿಕಾಯ ಸೃಷ್ಟಿಯಾಗಿದ್ದು ಕಂಡುಬಂದರೆ, ಮೊಡೆರ್ನಾ, ಫೈಝರ್ನ ಎರಡನೇ ಡೋಸ್ ಹಾಕಿಸಿಕೊಂಡರೆ ಅಂತಹ ಪ್ರಯೋಜನ ಆಗಿಲ್ಲದಿರುವುದು ಸಹ ಗೊತ್ತಾಯಿತು. ಹೀಗಾಗಿ ಈಗಾಗಲೇ ಕೋವಿಡ್ ಸೋಂಕಿಗೆ ಒಳಗಾದವರಿಗೆ ಒಂದೇ ಡೋಸ್ ಲಸಿಕೆ ನೀಡುವ ಮೂಲಕ ಪ್ರತಿಕಾಯ ಸೃಷ್ಟಿಸುವಲ್ಲಿ ಯಾವ ಲಸಿಕೆ ಪರಿಣಾಮಕಾರಿ ಎಂಬ ನಿರ್ದಿಷ್ಟ ಅಧ್ಯಯನ ಕೈಗೊಂಡಾಗ ಸ್ಪುಟ್ನಿಕ್ ವಿ ಲಸಿಕೆಗೆ ಈ ಅಗ್ರ ಶ್ರೇಯಾಂಕ ದೊರೆತಿದೆ ಎಂಬುದನ್ನು ಅಧ್ಯಯನ ವರದಿ ತಿಳಿಸಿದೆ.

ಇದನ್ನೂ ಓದಿ... ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆ: ಮೂರು ವಾರಗಳಲ್ಲಿ ದ್ವಿಗುಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.