ಏಳು ಮರಿಗೆ ಜನ್ಮ ನೀಡಿ ಸುದ್ದಿಯಾಗಿದ್ದ ಹಿಮ ಚಿರತೆ
ಕ್ಯಾನ್ಸರ್ನಿಂದ ಬಳಲುತ್ತಿದ್ದ ‘ಹಿಮಾನಿ‘ ಇನ್ನಿಲ್ಲ!

ಕೇಪೆ ಮೇ (ಅಮೆರಿಕ): ಒಟ್ಟು ಏಳು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡುವ ಮೂಲಕ ದೇಶದಾದ್ಯಂತ ಗಮನ ಸೆಳೆದಿದ್ದ ‘ಹಿಮಾನಿ‘ ಎಂಬ ಹಿಮ ಚಿರತೆ 17ನೇ ವಯಸ್ಸಿನಲ್ಲಿ ಕ್ಯಾನ್ಸರ್ನಿಂದ ಸಾವನ್ನಪ್ಪಿದೆ ಎಂದು ನ್ಯೂಜೆರ್ಸಿಯ ಮೃಗಾಲಯ ತಿಳಿಸಿದೆ.
‘ಒಂದೇ ಬಾರಿಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದ ‘ಹಿಮಾನಿ‘ ಹಿಮ ಚಿರತೆಗಳ ಸಂತತಿ ಕುಸಿಯುತ್ತಿರುವ ಸಂದರ್ಭದಲ್ಲಿ ದೇಶದ ಕಣ್ಮಣಿಯಾಗಿತ್ತು. ಅದು ಜನ್ಮ ನೀಡಿದ ಮರಿಗಳನ್ನು ತಳಿ ವೃದ್ಧಿಗಾಗಿ ದೇಶದ ವಿವಿಧ ಮೃಗಾಲಯಗಳಿಗೆ ಸ್ಥಳಾಂತರಿಸಲಾಗಿದೆ. ಟೆನ್ನೇಸ್ಸಿಯಾ ನಾಕ್ಸಿವಿಲ್ಲೆ ಮೃಗಾಲಯದಲ್ಲಿ 2003ರ ಜೂನ್ನಲ್ಲಿ ಜನಿಸಿದ ಈ ಹಿಮ ಚಿರತಯನ್ನು 2009ರಲ್ಲಿ ಕೇಪ್ ಮೇ ಕೌಂಟಿ ಮೃಗಾಯಲಯಕ್ಕೆ ತರಲಾಗಿತ್ತು’ ಎಂದು ಮೃಗಾಲಯದ ಉಸ್ತುವಾರಿಗಳು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.