ಲಿಬಿಯಾ: ಅಧ್ಯಕ್ಷ ಸ್ಥಾನಕ್ಕೆ ಗಡಾಫಿ ಮಗ ಸ್ಪರ್ಧೆ

ಟ್ರಿಪೋಲಿ: ಲಿಬಿಯಾದಲ್ಲಿ ಡಿ. 24ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಲ್ಲಿನ ಮಾಜಿ ನಾಯಕ ಮುಅಮ್ಮರ್ ಗಡಾಫಿ ಅವರ ಪುತ್ರ ಸೈಫ್ ಅಲ್–ಇಸ್ಲಾಮ್ ಅಲ್– ಗಡಾಫಿ ಅವರು ಭಾನುವಾರ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಚುನಾವಣಾ ಆಯೋಗವು ತಿಳಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ತೀವ್ರ ಸ್ಪರ್ಧೆ ಒಡ್ಡುವ ನಾಯಕರಲ್ಲಿ ಪಟ್ಟಿಯಲ್ಲಿ ಸೈಫ್ ಅಲ್–ಇಸ್ಲಾಮ್ ಅಲ್ ಗಡಾಫಿ ಅವರ ಹೆಸರು ಮುಂಚೂಣಿಯಲ್ಲಿದೆ. ಲಿಬಿಯಾದ ಪೂರ್ವ ವಿಭಾಗದ ಸೇನಾ ಕಮಾಂಡರ್ ಖಲೀಫಾ ಹಫ್ತಾರ್, ಪ್ರಧಾನ ಮಂತ್ರಿ ಅಬ್ದುಲ್ ಹಮಿದ್ ಅಲ್-ದ್ಬೀಬಾ ಮತ್ತು ಸಂಸತ್ತಿನ ಸ್ಪೀಕರ್ ಅಗುಯಿಲಾ ಸಲೇಹ್ ಕೂಡಾ ಕಣದಲ್ಲಿದ್ದಾರೆ.
ಸೆಭಾ ಪಟ್ಟಣದಲ್ಲಿ ಭಾನುವಾರ ಸಾಂಪ್ರದಾಯಿಕವಾಗಿ ಕಂದು ಬಣ್ಣದ ನಿಲುವಂಗಿ, ತಲೆಗೆ ಪೇಟಾ ಸುತ್ತುಕೊಂಡು ಚುನಾವಣಾ ನೋಂದಣಿ ಕೇಂದ್ರಕ್ಕೆ ಹಾಜರಾದ ಸೈಫ್ ಅಲ್–ಇಸ್ಲಾಮ್ ಅಲ್ ಗಡಾಫಿ ಅವರು, ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎನ್ನುವ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.