ಭಾನುವಾರ, ಅಕ್ಟೋಬರ್ 25, 2020
27 °C

ಸೇನಾ ಪಥಸಂಚಲನದಲ್ಲಿ ಕ್ಷಿಪಣಿ ಪ್ರದರ್ಶನ: ದಕ್ಷಿಣ ಕೊರಿಯಾ ಕಳವಳ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೋಲ್‌: ಉತ್ತರ ಕೊರಿಯಾದ ಆಡಳಿತಾರೂಢ ಪಕ್ಷದ 75ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಸೇನಾ ಪಥಸಂಚಲನದ ವೇಳೆ ದೀರ್ಘ ದೂರ ವ್ಯಾಪ್ತಿಯ ಕ್ಷಿಪಣಿ ಪ್ರದರ್ಶಿಸಿರುವುದಕ್ಕೆ ದಕ್ಷಿಣ ಕೊರಿಯಾ ಭಾನುವಾರ ಕಳವಳ ವ್ಯಕ್ತಪಡಿಸಿದೆ.

 ‘ಈ ಹಿಂದಿನ ನಿಶಸ್ತ್ರೀಕರಣ ಒಪ್ಪಂದಕ್ಕೆ ಉತ್ತರ ಕೊರಿಯಾವು ಬದ್ಧತೆ ತೋರಬೇಕು’ ಎಂದೂ ಹೇಳಿದೆ.

ಉತ್ತರ ಕೊರಿಯಾದ ಪ್ಯಾಂಗ್‌ಯಾಂಗ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೇನಾ ಪಥಸಂಚಲನದ ವೇಳೆ ಇದೇ ಮೊದಲ ಬಾರಿಗೆ ಎರಡು ಕ್ಷಿಪಣಿಗಳನ್ನು ವಿದೇಶಿ ಪ್ರೇಕ್ಷಕರ ಮುಂದೆ ಪ್ರದರ್ಶಿಸಲಾಗಿದೆ.

‘ಶಾಂತಿ ಕಾಪಾಡುವ ಸಲುವಾಗಿ 2018ರಲ್ಲಿ ಮಾಡಿಕೊಂಡಿರುವ ಒಪ್ಪಂದಕ್ಕೆ ಉತ್ತರ ಕೊರಿಯಾ ಬದ್ಧವಾಗಿರಬೇಕು’ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ ಒತ್ತಾಯಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು