ಶುಕ್ರವಾರ, ಮೇ 27, 2022
21 °C

ಭೂಮಿಗೆ ಮರಳಿದ ಗಗನಯಾನಿ ರಾಜಾ ಚಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ ಕೆನವೆರಾಲ್‌, ಅಮೆರಿಕ (ಎಪಿ): ಭಾರತ ಮೂಲದ ಅಮೆರಿಕ ಗಗನಯಾತ್ರಿ ರಾಜಾ ಚಾರಿ ಸೇರಿ ನಾಲ್ವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಾರ್ಯನಿರ್ವಹಿಸಿ, ಎಲಾನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಶುಕ್ರವಾರ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ.

ರಾಜಾ ಚಾರಿ ಸೇರಿ ಮೂವರು ಅಮೆರಿಕದ ಗಗನಯಾತ್ರಿಗಳು ಮತ್ತು ಒಬ್ಬ ಜರ್ಮನಿಯ ಗಗನಯಾನಿ ಹೊತ್ತ ಕ್ಯಾಪ್ಸುಲ್‌ ಬಾಹ್ಯಾಕಾಶ ನಿಲ್ದಾಣ ತೊರೆದ 24 ತಾಸುಗಳ ನಂತರ ಫ್ಲಾರಿಡಾ ಕರಾವಳಿ ಟ್ಯಾಂಪಾ ಬಳಿ ಇಳಿದಿದೆ. ಗಗನಯಾತ್ರಿಗಳು ವೈದ್ಯಕೀಯ ಪರೀಕ್ಷೆಯ ನಂತರ ಹೂಸ್ಟನ್‌ಗೆ ವಾಪಸಾಗುವ ನಿರೀಕ್ಷೆಯಲ್ಲಿ ನಾಸಾ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು