ಸ್ಪೇನ್‌ನಲ್ಲಿ ಸೈಬರ್ ದಾಳಿ: ಗುಪ್ತಚರ ನಿರ್ದೇಶಕಿ ಪಾಜ್ ಎಸ್ಟಬೇನ್ ವಜಾ

ಬಾರ್ಸಿಲೋನಾ: ಸ್ಪೇನ್‌ನಲ್ಲಿ ಪ್ರಧಾನಿ ಸೇರಿದಂತೆ ಪ್ರಮುಖ ರಾಜಕಾರಣಿಗಳ ಮೊಬೈಲ್ ಫೋನ್ ಹ್ಯಾಕ್ ಆದ ಬೆನ್ನಲ್ಲೇ ದೇಶದ ಗುಪ್ತಚರ ದಳದ ನಿರ್ದೇಶಕರನ್ನೇ ವಜಾ ಮಾಡಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ. ಪಾಜ್ ಎಸ್ಟಬೇನ್ ವಜಾಗೊಂಡ ರಾಷ್ಟ್ರೀಯ ಗುಪ್ತಚರ ಕೇಂದ್ರದ (ಸಿಎನ್‌ಐ)ನಿರ್ದೇಶಕಿ.
ದೇಶದಲ್ಲಿ ಕ್ಯಾಟಲಾನ್ ಪ್ರತ್ಯೇಕತಾವಾದಿಗಳ ಚಲನವಲನ ಸೇರಿದಂತೆ ಪ್ರಧಾನಮಂತ್ರಿ, ಪ್ರಮುಖ ರಕ್ಷಣಾ ಹಾಗೂ ಭದ್ರತಾ ಸಿಬ್ಬಂದಿ ಮೊಬೈಲ್ ಫೋನ್ ಹ್ಯಾಕ್ ಬಗ್ಗೆ ಮೊದಲೇ ಮಾಹಿತಿ ನೀಡುವಲ್ಲಿ ವಿಫಲವಾದ ಕಾರಣ ಸಿಎನ್‌ಐ ನಿರ್ದೇಶಕರನ್ನು ವಜಾ ಮಾಡಲಾಗಿದೆ. ರಕ್ಷಣಾ ಸಚಿವೆ ಮಾರ್ಗರೇಟ್ ರೊಬೆಲ್ಸ್ ಸಂಪುಟ ಸಭೆ ಬಳಿಕ ಈ ಬಗ್ಗೆ ಘೋಷಿಸಿದ್ದಾರೆ.
ಇದೇ ವೇಳೆ, ’ಸರ್ಕಾರದ ಫೋನ್ ಹ್ಯಾಕ್ ಆಗಿರುವ ವಿಷಯ ತಿಳಿಸಲು ಸಿಎನ್‌ಐ ಒಂದು ವರ್ಷ ಸಮಯ ತೆಗೆದುಕೊಂಡಿದೆ. ಇದರರ್ಥ ಗುಪ್ತಚರ ಸಂಸ್ಥೆಯಲ್ಲಿ ಸುಧಾರಣೆ ಆಗಬೇಕಿದೆ ಎಂಬುದು. ಮತ್ತೊಮ್ಮೆ ಇಂಥ ಸೈಬರ್ ದಾಳಿ ನಡೆಯುವುದಿಲ್ಲ ಎಂಬ ಭರವಸೆ ನೀಡಲು ಹೊರಟಿದ್ದೇವೆ‘ ಎಂದು ತಿಳಿಸಿದ್ದಾರೆ. ಇದೇ ವೇಳೆ ಗುಪ್ತಚರ ದಳದಲ್ಲಿ 40 ವರ್ಷ ಸೇವೆ ಸಲ್ಲಿಸಿರುವ ಎಸ್ಪೆರಂಝಾ ಕ್ಯಾಸ್ಟೆಲೈರೋ ಮುಂದಿನ ನಿರ್ದೇಶಕಿ ಆಗಬಹುದು ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.