ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ಸ್ಪುಟ್ನಿಕ್ ವಿ ಲಸಿಕೆ ಶೇ.92ರಷ್ಟು ಪರಿಣಾಮಕಾರಿ: ರಷ್ಯಾ ಇನ್ಸಿಟ್ಯೂಟ್

Last Updated 11 ನವೆಂಬರ್ 2020, 14:59 IST
ಅಕ್ಷರ ಗಾತ್ರ

ಹೈದರಾಬಾದ್: ರಷ್ಯಾದ ಗಮಲೆಯಾ ನ್ಯಾಷನಲ್ ರಿಸರ್ಚ್ ಇನ್ಸಿಟ್ಯೂಟ್ ಆಫ್ ಎಪಿಡೆಮಿಯೊಲಜಿ ಆ್ಯಂಡ್ ಮೆಕ್ರೊಬಯಾಲಜಿಯಲ್ಲಿ ಅಭಿವೃದ್ದಿ ಪಡಿಸಿದ ಸ್ಪುಟ್ನಿಕ್ ವಿ ಲಸಿಕೆ ಕೋವಿಡ್ ರೋಗಕ್ಕೆ ಶೇ.92ರಷ್ಟು ಪರಿಣಾಮಕಾರಿ ಆಗಿದೆ.

40,000 ಸ್ವಯಂಸೇವಕರ ಮೇಲೆ 3ನೇ ಹಂತದ ಕ್ಲಿನಿಕಲ್ ಟ್ರಯಲ್ (ಮಾನವನ ಮೇಲೆ ಪ್ರಯೋಗ) ಮಾಡಲಾಗಿತ್ತು. ಈ ಬಗ್ಗೆ ಲಭಿಸಿದ ದತ್ತಾಂಶಗಳನ್ನು ಆಧರಿಸಿ ಈ ಮಾಹಿತಿ ನೀಡಲಾಗಿದೆ ಎಂದು ಗಮಲೇಯಾ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

16,000ಕ್ಕಿಂತಲೂ ಹೆಚ್ಚು ಸ್ವಯಂ ಸೇವಕರ ಮೇಲೆಈ ಲಸಿಕೆ ಪ್ರಯೋಗ ಮಾಡಲಾಗಿತ್ತು. ಕೊರೊನಾವೈರಸ್ ದೃಢಪಟ್ಟಿರುವ 20 ಪ್ರಕರಣಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿಲಸಿಕೆ ಹಾಕಿದ ವ್ಯಕ್ತಿಗಳು ಮತ್ತು ಪ್ಲೇಸ್‌ಬೊ ಔಷಧಿಗಳನ್ನು ಬಳಸಿದವರನ್ನು ವರ್ಗೀಕರಿಸಲಾಗಿತ್ತು. ಏತನ್ಮಧ್ಯೆ ಎರಡನೇ ಡೋಸ್ ಪಡೆದ ನಂತರ ಸ್ಪುಟ್ನಿಕ್ ವಿ ಲಸಿಕೆ ಪಡೆದವರಲ್ಲಿ ಲಸಿಕೆ ಶೇ.92ರಷ್ಟು ಪರಿಣಾಮಕಾರಿ ಎಂಬುದು ಕಂಡು ಬಂದಿರುವುದಾಗಿ ಪ್ರಕಟಣೆಯಲ್ಲಿ ಹೇಳಿದೆ.

2020 ಸೆಪ್ಟೆಂಬರ್‌ನಲ್ಲಿ ಡಾ. ರೆಡ್ಡೀಸ್ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್), ರಷ್ಯಾದ ಸಾರ್ವಭೌಮ ಸಂಪತ್ತು ನಿಧಿ, ಸ್ಪುಟ್ನಿಕ್ ವಿ ಲಸಿಕೆ ಮತ್ತು ಭಾರತದಲ್ಲಿ ಅದರ ವಿತರಣೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿತ್ತು. ಈ ಸಹಭಾಗಿತ್ವದ ಫಲವಾಗಿ ಆರ್‌ಡಿಐಎಫ್ ಡಾ.ರೆಡ್ಡೀಸ್ ಲ್ಯಾಬ್‌ಗೆ 10 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT