ಮಂಗಳವಾರ, ಮೇ 17, 2022
27 °C

ಶ್ರೀಲಂಕಾದಲ್ಲಿ ಹಿಂಸಾಚಾರ: ಸಂಸದ ಸೇರಿದಂತೆ ಐವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ: ಶ್ರೀಲಂಕಾದಲ್ಲಿ ಸೋಮವಾರ ಸರ್ಕಾರದ ಪರ ಮತ್ತು ವಿರೋಧಿ ಹಿಂಸಾಚಾರ ಪ್ರತಿಭಟನೆಗಳಲ್ಲಿ ಆಡಳಿತಾರೂಢ ಸಂಸದ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಸುಮಾರು 200 ಮಂದಿ ಗಾಯಗೊಂಡಿದ್ದು 181 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲನ್ನರುವಾ ಜಿಲ್ಲೆಯ ವೀರಕೇತಿಯಾ ಪಟ್ಟಣದಲ್ಲಿ  ಸೋಮವಾರ ಸರ್ಕಾರಿ ವಿರೋಧಿ ಗುಂಪುಗಳು
ಕಾರಿನಲ್ಲಿ ತೆರಳುತ್ತಿದ್ದ ಎಸ್ಎಲ್‌ಪಿಪಿ ಸಂಸದ ಅಮರಕೀರ್ತಿ ಅತುಲಕೊರಲಾ(57) ಅವರ ಕಾರನ್ನು ಸುತ್ತುವರಿದವು. ಈ ವೇಳೆ ಎಸ್‌ಯುವಿ ಕಾರಿನಿಂದ ಗುಂಡು ಹಾರಿದ ಸದ್ದು ಕೇಳಿತು. ಆಕ್ರೋಶಗೊಂಡ ಪ್ರತಿಭಟನಕಾರರು ಕಾರನ್ನು ಪಲ್ಟಿ ಮಾಡಿದರು. ಕಾರಿನಿಂದ ತಪ್ಪಿಸಿಕೊಂಡ ಸಂಸದ ಸಮೀಪದ ಕಟ್ಟಡವೊಂದಕ್ಕೆ ತೆರಳಿ ಅವಿತುಕೊಂಡಿದ್ದರು. ಸಾವಿರಾರು ಪ್ರತಿಭಟನಕಾರರು ಕಟ್ಟಡವನ್ನು ಸುತ್ತುವರಿದಾಗ ಸಂಸದ ಇಬ್ಬರ ಮೇಲೆ ಗುಂಡು ಹಾರಿಸಿದರು. ಈ ವೇಳೆ 27 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಬಳಿಕ ಸಂಸದರು ತಾವೇ ಗುಂಡು ಹಾರಿಸಿಕೊಂಡಿದ್ದಾರೆ.

ಇದೇ ವೇಳೆ ಆಡಳಿತ ಪಕ್ಷದ ರಾಜಕಾರಣಿಯೊಬ್ಬರು ಸರ್ಕಾರದ ವಿರೋಧ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು