ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹20 ವರೆಗೆ ಇಳಿಕೆ

Last Updated 18 ಜುಲೈ 2022, 3:15 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ ₹20ರಷ್ಟು ಇಳಿಕೆ ಮಾಡಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಸೀಲೊನ್ ಪೆಟ್ರೋಲಿಯಂ ಕಾರ್ಪೊರೇಶನ್ (ಸಿಪಿಸಿ) ಆದೇಶ ಹೊರಡಿಸಿದೆ.

ಭಾನುವಾರ ರಾತ್ರಿ 10 ಗಂಟೆಯಿಂದಲೇ ನೂತನ ದರ ಜಾರಿಗೆ ಬಂದಿದೆ.

ಆರ್ಥಿಕ ಸಂಕಷ್ಟ ಮತ್ತು ಅಸ್ಥಿರ ಸರ್ಕಾರದ ಸಮಸ್ಯೆಗೆ ಸಿಲುಕಿರುವ ಶ್ರೀಲಂಕಾದಲ್ಲಿ ಫೆಬ್ರುವರಿಯಿಂದೀಚೆಗೆ ಐದು ಬಾರಿ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು.

ಪೆಟ್ರೋಲ್ ಒಕ್ಟೇನ್ 92 ದರ ಲೀಟರ್‌ಗೆ ₹20 ಇಳಿಕೆ ಬಳಿಕ ₹450 ಆಗಿದೆ. ಪೆಟ್ರೋಲ್ ಒಕ್ಟೇನ್ 95 ಬೆಲೆಯಲ್ಲಿ ಲೀಟರ್‌ಗೆ ₹10 ಇಳಿಕೆಯಾಗಿದ್ದು, ₹540 ದರವಿದೆ.

ಸೂಪರ್ ಡೀಸೆಲ್ ದರದಲ್ಲೂ ಲೀಟರ್‌ಗೆ ₹10 ಇಳಿಕೆ ಬಳಿಕ ₹520 ಆಗಿದ್ದು, ಅಟೋ ಡೀಸೆಲ್ ಬೆಲೆ ₹20 ಇಳಿಕೆ ಬಳಿಕ ಲೀಟರ್‌ಗೆ ₹440 ದರವಿದೆ.

ತೈಲ ಖರೀದಿಗೆ ಪೆಟ್ರೋಲ್ ಬಂಕ್ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವುದು ಬೇಡ, ಎಲ್ಲರಿಗೂ ಇಂಧನ ಸರಬರಾಜು ಮಾಡಲು ವ್ಯವಸ್ಥೆ ಕೈಗೊಳ್ಳುತ್ತೇವೆ ಎಂದು ಸಿಪಿಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT