ಭಾನುವಾರ, ಸೆಪ್ಟೆಂಬರ್ 25, 2022
20 °C

ತೈಮೂರ್‌ ಜತೆ ಜಂಟಿ ಸಮರಾಭ್ಯಾಸ: ವರದಿ ಅಲ್ಲಗಳೆದ ಶ್ರೀಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಲೊಂಬೊ(ಪಿಟಿಐ): ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿಲಿರುವ ಪಾಕ್‌ ಯುದ್ಧನೌಕೆ ಪಿಎನ್‌ಎಸ್ ತೈಮೂರ್‌ ಜತೆ ಶ್ರೀಲಂಕಾ ನೌಕಾ ಪಡೆಯು ಜಂಟಿ ಸಮರಾಭ್ಯಾಸ ನಡೆಸುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ವರದಿಗಳನ್ನು ಶ್ರೀಲಂಕಾ ಭಾನುವಾರ ತಳ್ಳಿಹಾಕಿದೆ. 

ಆದರೆ, ಈ ನೌಕೆಯು ದೇಶವನ್ನು ತೊರೆಯುವಾಗ ಪಶ್ಚಿಮ ಸಮುದ್ರಗಳಲ್ಲಿ ಪೂರ್ವಯೋಜಿತವಲ್ಲದ ಕವಾಯತು ನಡೆಸಲಿದೆ ಎಂದು ಅದು ದೃಢಪಡಿಸಿದೆ. 

‘ಪಾಕಿಸ್ತಾನ ನೌಕಾಪಡೆಯ ತೈಮೂರ್ ಸಮರನೌಕೆ ಶುಕ್ರವಾರ ಕೊಲೊಂಬೊ ಬಂದರಿಗೆ ಬಂದಿದೆ. ಇದೊಂದು ಔಪಚಾರಿಕವಾದ ಅಧಿಕೃತ ಭೇಟಿ. ದ್ವೀಪ ರಾಷ್ಟ್ರ ತೊರೆಯುವಾಗ ಕೊಲೊಂಬೊ ಸಮುದ್ರದಲ್ಲಿ ದೇಶದ ನೌಕಾಪಡೆಯ ಎಸ್‌ಎಲ್‌ಎನ್‌ಎಸ್‌ ಸಿಂದೂರಲಾ ನೌಕೆಯ ಜತೆಗೆ ಪೂರ್ವಯೋಜಿತವಲ್ಲದ ಕವಾಯತು ನಡೆಸಲಿದೆ’ ಎಂದು ಶ್ರೀಲಂಕಾ ನೌಕಾಪಡೆ ಭಾನುವಾರ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು