ಮಾಲೆ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಗುರುವಾರ ಮಾಲ್ಡೀವ್ಸ್ನಿಂದ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಅಧ್ಯಕ್ಷ ರಾಜಪಕ್ಸ,ಅವರ ಪತ್ನಿ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳು ಅವರೊಂದಿಗೆ ಮಾಲ್ಡೀವ್ಸ್ನ ಮಾಲೆಯಿಂದ ಸೌದಿ ಏರ್ಲೈನ್ಸ್ ವಿಮಾನದಲ್ಲಿ ತೆರಳಿದ್ದಾರೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಮಾಲ್ಡೀವ್ಸ್ ರಕ್ಷಣಾ ಪಡೆಯ ವಿಶೇಷ ಪಡೆಗಳು ಅವರನ್ನು ವಿಮಾನ ಹತ್ತಿಸಿದವು ಎಂದು ವರದಿ ತಿಳಿಸಿದೆ.

ಅಧ್ಯಕ್ಷ ರಾಜಪಕ್ಸ ಅವರು ಬುಧವಾರ ಮುಂಜಾನೆ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾ ದೇಶವನ್ನು ಬಿಟ್ಟು ಮಾಲ್ಡೀವ್ಸ್ಗೆ ತೆರಳಿದ್ದರು.

ಬುಧವಾರ ರಾತ್ರಿಯೇ ನಿಗದಿತ ವಿಮಾನದಲ್ಲಿ ಅವರು ಸಿಂಗಪುರಕ್ಕೆ ತೆರಳಬೇಕಿತ್ತು ಆದರೆ, ಭದ್ರತೆಯ ಕಾರಣದಿಂದ ಅವರು ವಿಮಾನ ಹತ್ತಿರಲಿಲ್ಲ.

ಇದನ್ನೂ ಓದಿ..

ವಿಡಿಯೊ– ದಂಗೆ ಎದ್ದ ಜನ: ಶ್ರೀಲಂಕಾ ಪ್ರಧಾನಿ ಕುರ್ಚಿಯನ್ನು ಕಾಯುತ್ತಿರುವ ಮಿಲಿಟರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.