ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯೂಹಾತ್ಮಕ ಪ್ರದೇಶ ಮಾರಿಯುಪೋಲ್‌ಗೆ ರಷ್ಯಾ ದಿಗ್ಬಂಧನ: ನೀರು, ವಿದ್ಯುತ್‌ ಸ್ಥಗಿತ

Last Updated 5 ಮಾರ್ಚ್ 2022, 6:22 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ನ ವ್ಯೂಹಾತ್ಮಕ ಪ್ರದೇಶ, ಬಂದರು ನಗರ ಮಾರಿಯುಪೋಲ್ ಮೇಲೆ ಹಲವು ದಿನಗಳಿಂದ ತೀವ್ರ ದಾಳಿ ನಡೆಸುತ್ತಿದ್ದ ರಷ್ಯಾ ಪಡೆಗಳು, ಶನಿವಾರ ದಿಗ್ಬಂಧನ ಹಾಕಿವೆ ಎಂದು ಅಲ್ಲಿನ ಮೇಯರ್ ಶನಿವಾರ ತಿಳಿಸಿದ್ದಾರೆ. ಮಾನವೀಯ ಪರಿಹಾರ ಕಾರ್ಯಗಳಿಗೆ ಅನುವು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಜೋವ್ ಸಮುದ್ರ ತೀರದ, 4,50,000 ಜನಸಂಖ್ಯೆ ಇರುವ ಮಾರಿಯುಪೋಲ್‌ ಮೇಲೆ ತೀವ್ರ ಶೆಲ್‌ ದಾಳಿ ನಡೆಯುತ್ತಿದೆ. ತೀವ್ರ ಚಳಿಗಾಲದ ನಡುವೆಯೇ ನಗರಕ್ಕೆ ನೀರು, ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

‘ಸದ್ಯಕ್ಕೆ ನಾವು ನಾಗರಿಕರ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ಮಾರಿಯುಪೋಲ್ಅನ್ನು ದಿಗ್ಬಂಧನದಿಂದ ಹೊರತರಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಹುಡುಕುತ್ತಿದ್ದೇವೆ’ ಎಂದು ಮೇಯರ್ ವಾಡಿಮ್ ಬಾಯ್ಚೆಂಕೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕದನ ನಿಲ್ಲಿಸುವುದು ನಮ್ಮ ಆದ್ಯತೆಯಾಗಿದೆ. ಹೀಗಾದರಷ್ಟೇ, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಬಹುದು. ನಗರಕ್ಕೆ ಆಹಾರ ಮತ್ತು ಔಷಧವನ್ನು ತರಲು ಮಾನವೀಯ ಕಾರಿಡಾರ್ ಅನ್ನು ಸ್ಥಾಪಿಸಬಹುದು’ ಎಂದು ಅವರು ಹೇಳಿದರು.

ಮಾರಿಯುಪೋಲ್ ಅನ್ನು ವಶಪಡಿಸಿಕೊಳ್ಳುವುದು ರಷ್ಯಾಕ್ಕೆ ಯುದ್ಧದಲ್ಲಿ ವ್ಯೂಹಾತ್ಮಕವಾಗಿ ಪ್ರಮುಖ ಎನಿಸಿಕೊಂಡಿದೆ. ಅದನ್ನು ಸ್ವಾಧೀನಪಡಿಸಿಕೊಂಡರೆ ಕ್ರಿಮಿಯಾ ಕಡೆಯಿಂದ ಬರುವ ಪಡೆಗಳು ಉಕ್ರೇನ್‌ಗೆ ಸುಲಭವಾಗಿ ತಲುಪಬಹುದು. ಡಾನ್‌ಬಾಸ್‌ನಲ್ಲಿರುವ ಬಂಡುಕೋರ ಪಡೆಗಳಿಗೂ ಅನುಕೂಲವಾಗಲಿದೆ.

ಮಾರಿಯುಪೋಲ್ ನಿವಾಸಿಗಳು ಹೊರಹೋಗುವುದನ್ನು ತಡೆಯಲು ರಷ್ಯಾ ಪಡೆಗಳು ಸೇತುವೆಗಳು ಮತ್ತು ರೈಲುಗಳನ್ನು ನಾಶಪಡಿಸುತ್ತಿವೆ ಎಂದು ಮೇಯರ್‌ ಇತ್ತೀಚೆಗೆ ಆರೋಪಿಸಿದ್ದರು.

‘ಐದು ದಿನಗಳಿಂದ ನಮ್ಮ ನಗರ ಮತ್ತು ನಮ್ಮ ಜನ ನಿರ್ದಯ ದಾಳಿಗೆ ತುತ್ತಾಗಿದ್ದಾರೆ’ ಎಂದು ಮೇಯರ್‌ ವಾಡಿಮ್ ಬಾಯ್ಚೆಂಕೊ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT