ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಡದ ಶೇವಿಂಗ್ ಅಥವಾ ಟ್ರಿಮ್‌ಗೆ ನಿಷೇಧ ಹೇರಿದ ತಾಲಿಬಾನ್

Last Updated 27 ಸೆಪ್ಟೆಂಬರ್ 2021, 12:56 IST
ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದಲ್ಲಿ ತಾಲಿಬಾನಿಗಳು, ಗಡ್ಡದ ಶೇವ್ ಅಥವಾ ಟ್ರಿಮ್ ಮಾಡುವುದನ್ನು ನಿಷೇಧಿಸಿದ್ದಾರೆ. ಇದು ಇಸ್ಲಾಮಿಕ್ ಕಾನೂನಿನ ವ್ಯಾಖ್ಯಾನವನ್ನು ಉಲ್ಲಂಘಿಸುತ್ತದೆ ಎಂದು ತಾಲಿಬಾನ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಯಾರೇ ನಿಯಮವನ್ನು ಉಲ್ಲಂಘಿಸಿದರೂ ಅವರನ್ನು ಶಿಕ್ಷಿಸಲಾಗುವುದು ಎಂದು ತಾಲಿಬಾನ್‌ನ ಧಾರ್ಮಿಕ ಪೊಲೀಸರು ಹೇಳಿದ್ದಾರೆ.

ತಮಗೂ ಇದೇ ರೀತಿಯ ಆದೇಶಗಳು ಬಂದಿವೆ ಎಂದು ರಾಜಧಾನಿ ಕಾಬೂಲ್‌ನ ಕೆಲವು ಕ್ಷೌರಿಕರು ಹೇಳಿದ್ದಾರೆ.

ಉದಾರವಾದ ಸರ್ಕಾರ ರಚನೆಯ ಭರವಸೆ ನೀಡಿದ್ದ ತಾಲಿಬಾನ್, ಮತ್ತೆ ಹಳೆಯ ಕೆಟ್ಟ ನಿಯಮಗಳ ಜಾರಿಗೆ ಮುಂದಾಗಿದೆ.

ಹೆಲ್ಮಂಡ್ ಪ್ರಾಂತ್ಯದ ಸಲೂನ್‌ಗಳಲ್ಲಿ ಪ್ರಕಟಿಸಲಾದ ನೋಟಿಸ್‌ನಲ್ಲಿ, ಕೇಶ ವಿನ್ಯಾಸಕರು ಹೇರ್ ಕಟ್ ಮತ್ತು ಗಡ್ಡ ಶೇವಿಂಗ್ ಕುರಿತಂತೆ ಶರಿಯಾ ಕಾನೂನನ್ನು ಅನುಸರಿಸಬೇಕು ಎಂದು ತಾಲಿಬಾನ್ ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಈ ಬಗ್ಗೆ 'ದೂರು ನೀಡಲು ಯಾರಿಗೂ ಹಕ್ಕಿಲ್ಲ’ ಎಂದು ಅಧಿಸೂಚನೆಯಲ್ಲಿ ತಾಲಿಬಾನ್ ಉಲ್ಲೇಖಿಸಿರುವುದಾಗಿ ಬಿಬಿಸಿ ಹೇಳಿದೆ.

‘ಗಡ್ಡದಶೇವಿಂಗ್ ನಿಲ್ಲಿಸುವಂತೆ ನಮಗೆತಾಲಿಬಾನ್ ಹೋರಾಟಗಾರರು ಆದೇಶಿಸುತ್ತಿದ್ದಾರೆ. ನಮ್ಮನ್ನು ಹಿಡಿಯಲು ಅಂಡರ್ ಕವರ್ ಇನ್ಸ್‌ಪೆಕ್ಟರ್‌ಗಳನ್ನು ಕಳುಹಿಸಬಹುದು’ ಎಂದು ಕಾಬೂಲ್‌ನ ಒಬ್ಬ ಕ್ಷೌರಿಕ ಹೇಳಿದ್ದಾರೆ.

ತಾನು ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ನನಗೆ ಕರೆ ಮಾಡಿದ್ದರು. ಕೇಶ ವಿನ್ಯಾಸದಲ್ಲಿ ಅಮೇರಿಕನ್ ಶೈಲಿಗಳನ್ನು ಅನುಸರಿಸುವುದನ್ನು ನಿಲ್ಲಿಸಿ ಮತ್ತು ಯಾರ ಗಡ್ಡವನ್ನೂ ಶೇವ್ ಅಥವಾ ಟ್ರಿಮ್ ಮಾಡಬೇಡಿ ಎಂದು ಸೂಚಿಸಿದರು ಎಂದು ನಗರದಲ್ಲಿ ದೊಡ್ಡ ಸಲೂನ್ ನಡೆಸುತ್ತಿರುವ ಇನ್ನೊಬ್ಬ ಕೇಶ ವಿನ್ಯಾಸಕರು ಹೇಳಿದ್ಧಾರೆ.

1996 ರಿಂದ 2001ರವರೆಗೆ ತಾಲಿಬಾನ್ ಮೊದಲ ಬಾರಿಗೆ ಅಧಿಕಾರದಲ್ಲಿದ್ದಾಗ, ಅಬ್ಬರದ ಕೇಶ ವಿನ್ಯಾಸವನ್ನು ನಿಷೇಧಿಸಿತ್ತು. ಪುರುಷರು ಗಡ್ಡ ಬೆಳೆಸಬೇಕೆಂದು ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT