ಗುರುವಾರ , ಅಕ್ಟೋಬರ್ 21, 2021
29 °C
ಪ್ರತ್ಯಕ್ಷದರ್ಶಿಗಳ ಹೇಳಿಕೆ

ಅಫ್ಗನ್: ನಗರದ ಮುಖ್ಯಚೌಕದಲ್ಲಿ ಮೃತದೇಹ ನೇತುಹಾಕಿದ ತಾಲಿಬಾನ್

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್: ಪಶ್ಚಿಮ ಅಫ್ಗಾನಿಸ್ತಾನದ ಹೆರಾತ್ ನಗರದ ಮುಖ್ಯ ಚೌಕದಲ್ಲಿ ಕ್ರೇನ್‌ನಿಂದ ತಾಲಿಬಾನ್‌ಗಳು ಮೃತದೇಹವೊಂದನ್ನು ನೇಣು ಹಾಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಶನಿವಾರ ತಿಳಿಸಿದ್ದಾರೆ.

‘ಕ್ರೇನ್‌ನಲ್ಲಿ ನಾಲ್ಕು ಮೃತದೇಹಗಳನ್ನು ತರಲಾಯಿತು. ಒಂದನ್ನು ಇಲ್ಲಿ ಹಾಕಿ, ಉಳಿದ ಮೂರು ಮೃತದೇಹಗಳನ್ನು ನಗರದ ಇತರೆಡೆ ಇರುವ ಚೌಕಗಳ ಕಡೆಗೆ ಒಯ್ಯಲಾಯಿತು’ ಎಂದು ಚೌಕದ ಬಳಿ ಔಷಧಿ ಅಂಗಡಿಯನ್ನು ನಡೆಸುವ ಅಹಮದ್ ಸಿದ್ಧಿಕಿ ಅವರು ಮಾಹಿತಿ ನೀಡಿದ್ದಾರೆ.

‘ಈ ನಾಲ್ವರು ಅಪಹರಣಕ್ಕೆ ಪ್ರಯತ್ನಿಸಿದ್ದರು. ಹಾಗಾಗಿ, ಅವರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ತಾಲಿಬಾನ್ ಘೋಷಿಸಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು