ಸೋಮವಾರ, ಸೆಪ್ಟೆಂಬರ್ 20, 2021
27 °C

ಕಾಬೂಲ್‌ನ ಅಮ್ಯೂಸ್ಮೆಂಟ್‌ ಪಾರ್ಕ್‌ಗೆ ನುಗ್ಗಿ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಫ್ಗಾನಿಸ್ತಾನವನ್ನು ವಶಪಡಸಿಕೊಂಡ ತಾಲಿಬಾನ್ ಉಗ್ರರು ಕಾಬೂಲ್‌ನ ಅಮ್ಯೂಸ್ಮೆಂಟ್‌ ಪಾರ್ಕ್‌ವೊಂದಕ್ಕೆ ನುಗ್ಗಿ ಅಲ್ಲಿನ ಮಕ್ಕಳ ಆಟಿಕೆ ಕಾರುಗಳಲ್ಲಿ ಆಟವಾಡುತ್ತಿರುವ, ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: 

ಕಾಬೂಲ್‌ನಲ್ಲಿರುವ ರಾಯಿಟರ್ಸ್ (ಸುದ್ದಿ ಸಂಸ್ಥೆ) ಹಿರಿಯ ವರದಿಗಾರ ಹಮೀದ್ ಶಾಲಿಜಿ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಾಲಿಬಾನ್ ಉಗ್ರರು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು, ಅಮ್ಯೂಸ್‌ಮೆಂಟ್‌ ಪಾರ್ಕ್‌ನ ಮಕ್ಕಳ ಆಟಿಕೆಯ ಬಂಪರ್ ಕಾರುಗಳಲ್ಲಿ ಕುಳಿತು ಆಟವಾಡುತ್ತಿರುವುದು ವಿಡಿಯೊದಲ್ಲಿದೆ.

ಇದನ್ನೂ ಓದಿ: 

ಹಮೀದ್‌ ಶಾಲಿಜಿ ಅವರು ಮತ್ತೊಂದು ವಿಡಿಯೊವನ್ನೂ ಹಂಚಿಕೊಂಡಿದ್ದು, ಅದರಲ್ಲಿ ಉಗ್ರರು ಪಾರ್ಕ್‌ನ ಆಟದ ಕುದುರೆಗಳ ಮೇಲೆ ಕುಳಿತುಕೊಂಡಿರುವುದು ಕಾಣುತ್ತದೆ.

ಜಾನ್‌ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಸ್ಟೀವ್‌ ಹಂಕಿ ಎಂಬುವವರೂ ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಉಗ್ರರು ಅಫ್ಗಾನ್‌ ಅಧ್ಯಕ್ಷರ ಅರಮನೆಯ ಜಿಮ್‌ ಅಲ್ಲಿ ತಮಗೆ ತೋಚಿದಂತೆ ವ್ಯಾಯಾಮ ಮಾಡುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು