ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಅಫ್ಗಾನ್ ಪ್ರತಿಭಟನಾಕಾರರಿಗೆ ತಾಲಿಬಾನ್‌ ಸಂಧಾನದ ಸಂದೇಶ: ರಷ್ಯಾ ರಾಯಭಾರಿ

Last Updated 22 ಆಗಸ್ಟ್ 2021, 7:12 IST
ಅಕ್ಷರ ಗಾತ್ರ

ಕಾಬೂಲ್: ಉತ್ತರ ಅಫ್ಗಾನಿಸ್ತಾನದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ಸಂಧಾನಕ್ಕೆ ಸಿದ್ಧವಿರುವುದಾಗಿ ಅವರಿಗೆ ತಿಳಿಸುವಂತೆ ತಾಲಿಬಾನ್ ನಾಯಕರು ತಮಗೆ ಹೇಳಿದ್ದಾಗಿ ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರಿ ಮಾಹಿತಿ ನೀಡಿದ್ದಾರೆ.

ಪಂಜ್ಶಿರ್ ಕಣಿವೆಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ರಾಜಕೀಯ ಸಂಧಾನಕ್ಕೆ ತಾಲಿಬಾನ್ ಮುಂದಾಗಿದೆ. ಈ ಕುರಿತು ತಾಲಿಬಾನ್‌ನ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ ಎಂದು ರಷ್ಯಾ ರಾಯಭಾರಿ ಡಿಮಿಟ್ರಿ ಜಿರ್ನೋವ್ ತಿಳಿಸಿದ್ದಾರೆ.

ಪಂಜ್ಶಿರ್ ಕಣಿವೆ ಪ್ರದೇಶದಲ್ಲಿ ರಕ್ತಪಾತ ನಡೆಸುವುದು ಬೇಕಿಲ್ಲ. ಹೀಗಾಗಿ ಮಾತುಕತೆಗೆ ಮುಂದಾಗಿರುವುದಾಗಿ ತಾಲಿಬಾನ್ ನಾಯಕರು ಹೇಳಿದ್ದಾರೆ ಎಂದು ಜಿರ್ನೋವ್ ತಿಳಿಸಿದ್ದಾರೆ.

ಕಾಬೂಲ್‌ನ ಉತ್ತರಕ್ಕಿರುವ ಪಂಜ್ಶಿರ್‌ ಕಣಿವೆಯು ತಾಲಿಬಾನ್‌ ವಿರೋಧಿಸುವವರ ಪ್ರಬಲ ಒಕ್ಕೂಟ ಹೊಂದಿದ್ದು, ಇದು 2001ರಿಂದ ಅಮೆರಿಕ ಪಡೆಗಳ ಜತೆ ಮೈತ್ರಿ ಮಾಡಿಕೊಂಡಿದೆ. ಸದ್ಯ ಕಣಿವೆಯು ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ವಶವಾಗದಿರುವ ಏಕೈಕ ಪ್ರದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT