ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ವಿಮಾನ ಪತನದಲ್ಲಿ ಟಾರ್ಜನ್ ನಟ ಜೋ ಲಾರಾ ಸಾವು

Last Updated 31 ಮೇ 2021, 6:33 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ನಾಶ್‌ವಿಲ್ ನಗರದ ಸಮೀಪ ಶನಿವಾರ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟ ಏಳು ಮಂದಿಯಲ್ಲಿ ಟಾರ್ಜನ್ ನಟ ಜೋ ಲಾರಾ ಮತ್ತು ಅವರ ಪತ್ನಿಯೂ ಇರುವುದು ತಿಳಿದುಬಂದಿದೆ.

ನಾಶ್‌ವಿಲ್ ನಗರದಿಂದ 19 ಕಿಲೋಮೀಟರ್‌ ದೂರದಲ್ಲಿರುವ ಪೆರ್ಸಿ ಪ್ರೀಸ್ಟ್‌ ಸರೋವರದಲ್ಲಿ ವಿಮಾನ ಪತನಗೊಂಡು ಎಲ್ಲ 7 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.

ಸ್ಥಳೀಯ ಕಾಲಮಾನ ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಮಾನ ಪತನಗೊಂಡಿತ್ತು. ಸ್ಮಿರ್ನಾದ ಟೆನ್ನೆಸ್ಸೀ ವಿಮಾನ ನಿಲ್ದಾಣದಿಂದ ಫ್ಲಾರಿಡಾದ ಪಾಮ್ ಬೀಚ್‌ಗೆ ಹೊರಟಿದ್ದ ಲಘು ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ ಎಂದು ರುದರ್‌ಫೋರ್ಡ್‌ ಕೌಂಟಿಯ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT