ವಾಷಿಂಗ್ಟನ್: ಕಪ್ಪು ಸಮುದ್ರದ ಮೇಲೆ ತನ್ನ ಡ್ರೋನ್‌ಗೆ ಅಜಾಗರೂಕತೆಯಿಂದ ರಷ್ಯಾದ ಜೆಟ್ ಅಪ್ಪಳಿಸಿದೆ ಎಂದು ಅಮೆರಿಕ ಮಂಗಳವಾರ ಖಂಡಿಸಿದೆ. ಇದರಿಂದಾಗಿ, ತಮ್ಮ ಡ್ರೋನ್ ಹಾಳಾಯಿತು ಎಂದು ಅದು ಹೇಳಿದೆ.

‘ಕಪ್ಪು ಸಮುದ್ರದ ಮೇಲೆ ಅಮೆರಿಕ ವಿಮಾನಗಳನ್ನು ರಷ್ಯಾದ ವಿಮಾನಗಳು ತಡೆಹಿಡಿಯುವುದು ಅಸಾಮಾನ್ಯವೇನಲ್ಲ’ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಪತ್ರಕರ್ತರಿಗೆ ಹೇಳಿದರು.

ಇದು ವೃತ್ತಿಪರವಲ್ಲದ, ಅಜಾಗರೂಕ ವರ್ತನೆಯಾಗಿದೆ ಎಂದೂ ಅವರು ಟೀಕಿಸಿದ್ದಾರೆ.

ಘಟನೆಯ ಬಗ್ಗೆಅಧ್ಯಕ್ಷ ಜೋ ಬೈಡನ್ ಅವರಿಗೆ ತಿಳಿಸಲಾಗಿದೆ. ನಮ್ಮ ಕಳವಳ ಕುರಿತಂತೆ ರಷ್ಯಾ ಗಮನಸೆಳೆಯಲಾಗುವುದು ಎಂದು ಕಿರ್ಬಿ ಹೇಳಿದರು.

‘ನಾವು ಅಂತರರಾಷ್ಟ್ರೀಯ ವಾಯುಪ್ರದೇಶದಲ್ಲಿ ವಿಮಾನ ಅಥವಾ ಡ್ರೋನ್‌ಗಳ ಹಾರಾಟ ನಡೆಸುವ ಮೊದಲು ರಷ್ಯಾ ಜೊತೆ ಚೆಕ್ ಇನ್ ಮಾಡಬೇಕಾದ ಯಾವುದೇ ಅವಶ್ಯಕತೆಯಿಲ್ಲ, ನಾವು ಅದನ್ನು ಮಾಡುವುದೂ ಇಲ್ಲ’ಎಂದು ಅವರು ಹೇಳಿದರು.

ರಷ್ಯಾದ ಎಸ್‌ಯು-27 ಜೆಟ್ ಅಮೆರಿಕದ ಎಂಕ್ಯೂ-9 ರೀಪರ್ ಡ್ರೋನ್‌ನ ಪ್ರೊಪೆಲ್ಲರ್‌ಗೆ ಅಪ್ಪಳಿಸಿತ್ತು. ಹೀಗಾಗಿ, ಅದನ್ನು ನೀರಿನಲ್ಲಿ ಇಳಿಸಿದ್ದರಿಂದ ಅದರ ನಷ್ಟವಾಯಿತು ಎಂದು ಅಮೆರಿಕ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಘರ್ಷಣೆಗೂ ಮೊದಲು, ರಷ್ಯಾದ ಎರಡು ಎಸ್‌ಯು-27 ಜೆಟ್‌ಗಳು ಎಂಕ್ಯೂ-9 ಡ್ರೋನ್ ಮೇಲೆ ಇಂಧನ ಸುರಿದು, ಬಳಿಕ ಅದರ ಎದುರಿಗೆ ಹಾರಾಟ ನಡೆಸಿದವು’ಎಂದೂ ಅದು ಹೇಳಿದೆ.

ಅಮೆರಿಕವು ಎಂಕ್ಯೂ -9 ರೀಪರ್ ಡ್ರೋನ್‌ಗಳನ್ನು ಕಣ್ಗಾವಲಿಗೆ ಬಳಸುತ್ತದೆ. ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಮೆರಿಕದ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಇತರ ದೇಶಗಳು ಸಹ ರೀಪರ್ಸ್ ಅನ್ನು ಬಳಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.