ಮಂಗಳವಾರ, ಜುಲೈ 27, 2021
21 °C
ಕೋವಿಡ್‌ ಲಸಿಕೆ ಪೂರೈಕೆಯಲ್ಲಿ ಕೊರತೆ

ಲಸಿಕೆಪೂರೈಕೆ: ಭಾರತದ ಜತೆ ಮಾತುಕತೆ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಲಸಿಕೆ ಪೂರೈಕೆಯ ಕೊರತೆಯಿಂದಾಗಿ ಎರಡನೇ ಡೋಸ್‌ ನೀಡಿಕೆಯನ್ನು ಮುಂದೂಡಿದ್ದ ರಾಷ್ಟ್ರಗಳಿಗೆ ಪುನಃ ಲಸಿಕೆಯ ಸರಬರಾಜು ಆರಂಭಿಸುವಂತೆ ಅಸ್ಟ್ರಾಜೆನೆಕಾ ಸಂಸ್ಥೆ, ಸೀರಂ ಇನ್‌ಸ್ಟಿಟ್ಯೂಟ್‌ ಹಾಗೂ ಭಾರತ ಸರ್ಕಾರದ ಜತೆಗೆ ವಿಶ್ವ ಆರೋಗ್ಯ ಸಂಸ್ಥೆಯು ತುರ್ತಾಗಿ ಮಾತುಕತೆ ನಡೆಸಲು ಪ್ರಯತ್ನಿಸಲಿದೆ ವಿಶ್ವಸಂಸ್ಥೆಯ ಆರೋಗ್ಯ ಘಟಕದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

‘ಲಸಿಕೆಯ ಕೊರತೆಯಿಂದಾಗಿ ಎರಡನೇ ಡೋಸ್‌ ನೀಡಿಕೆಯನ್ನು ಮುಂದೂಡಿರುವ ರಾಷ್ಟ್ರಗಳ ದೊಡ್ಡ ಪಟ್ಟಿಯೇ ಇದೆ. ಆಫ್ರಿಕಾದ ಹಲವು ರಾಷ್ಟ್ರಗಳು, ಲ್ಯಾಟಿನ್‌ ಅಮೆರಿಕ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳು ಲಸಿಕೆಯ ಅಭಾವ ಎದುರಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್‌ ಅದನೊಂ ಗೆಬ್ರಿಯೇಸಸ್‌ ಹೇಳಿದ್ದಾರೆ.

‘ಈ ತಿಂಗಳ ಆರಂಭದಲ್ಲಿ ಕೋವ್ಯಾಕ್ಸ್‌ ಸಂಸ್ಥೆಯ ಮೂಲಕ ಸುಮಾರು 8 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ. ಜಾಗತಿಕವಾಗಿ 20 ಕೋಟಿ ಡೋಸ್‌ ಲಸಿಕೆ ವಿತರಣೆಯಾಗಿದೆ. ಭಾರತದಲ್ಲಿನ ಕೋವಿಡ್‌ ಎರಡನೇ ಅಲೆ ಪರಿಣಾಮದಿಂದ ಲಸಿಕೆ ಪೂರೈಕೆಗೆ ಅಡ್ಡಿಯುಂಟಾಗಿದೆ’ ಎಂದು ಸಂಸ್ಥೆಯ ಹಿರಿಯ ಸಲಹೆಗಾರ ಬ್ರೂಸ್‌ ಐಲ್ವರ್ಡ್‌ ಹೇಳಿದರು. 

ಭಾರತದಲ್ಲಿ ಸಮಸ್ಯೆ ತೀವ್ರವಾಗಿರುವುದರಿಂದ ಅಲ್ಲಿ ತಯಾರಾದ ಲಸಿಕೆಗಳನ್ನು ಸ್ಥಳೀಯವಾಗಿಯೇ ಬಳಸಬೇಕಾಯಿತು. ಇದರಿಂದಾಗಿ ಬೇರೆ ದೇಶಗಳಿಗೆ ಲಸಿಕೆಯ ಸರಬರಾಜಿನಲ್ಲಿ ಏರುಪೇರಾಗಿದೆ. ಇದರ ಪರಿಣಾಮ ಅನೇಕ ರಾಷ್ಟ್ರಗಳ ಲಸಿಕಾ ಕಾರ್ಯಕ್ರಮದ ಮೇಲಾಗಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು