ಭಾನುವಾರ, ಮೇ 22, 2022
22 °C
ಅಧಿಕಾರಿಗಳೊಂದಿಗೆ ಸ್ಥಳೀಯರ ಬೀದಿಕಾಳಗ

ಶಾಂಘೈ: ಲಾಕ್‌ಡೌನ್‌ನಿಂದ ಬೇಸತ್ತ ಜನ 

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಶಾಂಘೈ (ಎಎಫ್‌ಪಿ): ಅಧಿಕಾರಿಗಳೊಂದಿಗೆ ಸ್ಥಳೀಯರ ಮಾತಿನ ಚಕಮಕಿ, ಲಾಕ್‌ಡೌನ್‌ನಿಂದ ಮನೆಗಳಿಂದ ಹೊರಬರಲಾರದೆ ಪರಿತಪಿಸುತ್ತಿರುವ ಜನರು, ಇವು ಶಾಂಘೈನಲ್ಲಿ ಸದ್ಯ ಕಾಣುತ್ತಿರುವ ದೃಶ್ಯಗಳು. 

ಶಾಂಘೈನಲ್ಲಿ ಹೇರಿರುವ ಸುದೀರ್ಘಾವಧಿಯ ಲಾಕ್‌ಡೌನ್‌ ಜನರ ಅಸಹನೆಗೆ ಕಾರಣವಾಗಿದೆ. ಶೂನ್ಯ ಕೋವಿಡ್‌ ಪ್ರಮಾಣವನ್ನು ದಾಖಲಿಸಲು ಚೀನಾ ಲಾಕ್‌ಡೌನ್‌ ತಂತ್ರದ ಮೊರೆ ಹೋಗಿದೆ. 

ಲಾಕ್‌ಡೌನ್‌ನಿಂದ ಜನರು ಹೈರಾಣಾಗಿದ್ದಾರೆ. ಶಾಂಘೈನ ಮಿನ್‌ಹಾಂಗ್‌ ಜಿಲ್ಲೆಯಲ್ಲಿ ಸ್ಥಳೀಯರು ಅಧಿಕಾರಿಗಳೊಂದಿಗೆ ಬೀದಿ ಕಾಳಗ ನಡೆಸಿದ್ದಾರೆ. ಈಚೆಗೆ ರಾತ್ರಿ ಆರೋಗ್ಯ ನಿರ್ವಹಣಾ ಸಿಬ್ಬಂದಿ ಮತ್ತು ಜನರ ನಡುವೆ ಜಗಳ ನಡೆದಿದೆ. ಅನೇಕರು ತಮ್ಮ ಕಟ್ಟಡದಿಂದ ಹೊರಗೆ ಬರಲು ಯತ್ನಿಸಿದರು. ಇನ್ನೂ ಕೆಲವರು ಕಿಟಕಿಗಳಿಂದ ವಸ್ತುಗಳನ್ನು ಬೀದಿಗೆ ಎಸೆದರು ಎಂದು ಜಿಲ್ಲೆಯ ಅಧಿಕಾರಿಗಳು ಹೇಳಿದರು. 

ಮಿನ್‌ಹ್ಯಾಂಗ್‌ನ ಜುವಾನ್‌ಕಿಯಾವೊನಲ್ಲಿ ಲಾಕ್‌ಡೌನ್‌ ವಿರುದ್ಧ ಜನರು ರಸ್ತೆಗಿಳಿದು ಘೋಷಣೆ ಕೂಗಿದರು. ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. 

ಇತ್ತೀಚಿನ ದಿನಗಳಲ್ಲಿ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿದ್ದರೂ ಅಧಿಕಾರಿಗಳು ಕಠಿಣ ನಿಯಮಗಳನ್ನು ಹೇರುತ್ತಿದ್ದಾರೆ. 

ಕೋವಿಡ್ ನೆಗೆಟಿವ್‌ ವರದಿಯಾದವರೂ ಸೇರಿದಂತೆ ಜನರು ವಾಸಿಸುವ ಪ್ರದೇಶದ ಆವರಣವನ್ನು ಕ್ವಾರಂಟೈನ್‌ ಮಾಡಲಾಗಿದೆ. ಆಹಾರ ವಿತರಣೆಯನ್ನು ಸೀಮಿತಗೊಳಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು