ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇಗುಲ ನೆಲಸಮ

ಮೆಲ್ಬೋರ್ನ್ (ಪಿಟಿಐ): ಖಲಿಸ್ತಾನ ಪರ ಬೆಂಬಲಿಗರು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಮತ್ತೊಂದು ಹಿಂದೂ ದೇಗುಲವನ್ನು ಧ್ವಂಸ ಮಾಡಿದ್ದಾರೆ. ಇದರೊಂದಿಗೆ 15 ದಿನಗಳಲ್ಲಿ ಮೂರು ದೇಗುಲಗಳು ದುಷ್ಕರ್ಮಿಗಳಿಂದ ನೆಲಸಮವಾಗಿವೆ ಎಂದು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.
ಇಲ್ಲಿನ ಅಲ್ಬರ್ಟ್ ಪಾರ್ಕ್‌ನಲ್ಲಿರುವ ಇಸ್ಕಾನ್ ದೇಗುಲದ ಗೋಡೆಗಳನ್ನು ಕೆಡವಿ ‘ಹಿಂದೂಸ್ತಾನ್ ಮುರ್ದಾಬಾದ್’ ಎಂಬುದಾಗಿ ಬರೆಯಲಾಗಿದೆ ಎಂದು ‘ದ ಆಸ್ಟ್ರೇಲಿಯಾ ಟುಡೇ’ ವೆಬ್‌ಸೈಟ್ ವರದಿ ಮಾಡಿದೆ.
‘ಘಟನೆಗೆ ಸಂಬಂಧಿಸಿದಂತೆ ವಿಕ್ಟೋರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆಗೆ ನೆರವಾಗಲು ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಅವರಿಗೆ ನೀಡಲಾಗಿದೆ’ ಎಂದು ದೇಗುಲದ ನಿರ್ದೇಶಕ (ಸಂವಹನ) ಭಕ್ತ ದಾಸ್ ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.