ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ನಲ್ಲಿ ರೈಲು ಅಪಘಾತ: 48 ಮಂದಿ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

Last Updated 2 ಏಪ್ರಿಲ್ 2021, 11:21 IST
ಅಕ್ಷರ ಗಾತ್ರ

ತೈಪೆ: ‘ತೈವಾನ್‌ನ ಪೂರ್ವ ಕರಾವಳಿಯಲ್ಲಿ ಶುಕ್ರವಾರ ರೈಲೊಂದು ಹಳಿ ತಪ್ಪಿ, 48 ಮಂದಿ ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದರು.

ಟೊರೊಕೊ ಜಾರ್ಜ್ ಪ್ರದೇಶದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರೈಲಿನಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

ವಿವರ: ‘ಮೇಲ್ಸೇತುವೆಯಿಂದ ಟ್ರಕ್‌ ಆಯತಪ್ಪಿ ಕೆಳಗಿರುವ ರೈಲು ಹಳ್ಳಿ ಮೇಲೆ ಬಿದ್ದಿದೆ. ಇದೇ ವೇಳೆ ಸುರಂಗದೊಳಗಿನಿಂದ ಬರುತ್ತಿದ್ದ ರೈಲು, ಟ್ರಕ್‌ಗೆ ಅಪ್ಪಳಿಸಿ, ಹಳಿ ತಪ್ಪಿದೆ. ರೈಲಿನ ಹೆಚ್ಚಿನ ಭಾಗ ಈಗಲೂ ಸುರಂಗದಲ್ಲಿಯೇ ಸಿಲುಕಿದೆ. ಕೆಲವು ಪ್ರಯಾಣಿಕರು ಅಲ್ಲಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ವರದಿ ಹೇಳಿದೆ.

ಮೇಲ್ಸೇತುವೆಯಲ್ಲಿ ಕಾಮಗಾರಿ ನಡೆಯುತ್ತಿತ್ತು. ರೈಲ್ವೆ ಇಲಾಖೆ ನಿರ್ಮಾಣ ಕಾರ್ಯಕ್ಕಾಗಿ ಈ ಟ್ರಕ್‌ ಅನ್ನು ಬಳಸಿಕೊಂಡಿತ್ತು. ಟ್ರಕ್‌ ಮೇಲಿನಿಂದ ಬಿದ್ದಾಗ, ಟ್ರಕ್‌ನಲ್ಲಿ ಯಾರೂ ಇರಲಿಲ್ಲ. ಒಟ್ಟಾರೆ ಈ ಘಟನೆ ಬಗ್ಗೆ ತನಿಖೆ ಆರಂಭವಾಗಿದೆ ಎಂದು ವರದಿ ತಿಳಿಸಿದೆ.

ರೈಲು ಅಪಘಾತದದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ತೈವಾನ್‌ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರು, ‘ತುರ್ತುಸೇವಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯದಲ್ಲಿ ನಿಯೋಜಿಸಲಾಗಿದೆ. ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT