ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಚುನಾವಣಾ ಫಲಿತಾಂಶ ಪ್ರಶ್ನಿಸಲು ಟ್ರಂಪ್‌ ತಂಡದ ಸಿದ್ಧತೆ

Last Updated 20 ನವೆಂಬರ್ 2020, 8:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರ ತಂಡವು ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ಪ್ರಶ್ನಿಸಲು ಸಿದ್ಧತೆ ನಡೆಸಿದೆ.

ಈ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್‌ ಮತ್ತು ಅವರ ತಂಡ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಪೆನ್ಸಿಲ್ವೇನಿಯಾ, ಮಿಚಿಗನ್‌,ಜಾರ್ಜಿಯಾ ಸೇರಿದಂತೆ ಇತರೆ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಲಿದ್ದೇವೆ’ ಎಂದು ಡೊನಾಲ್ಡ್‌ ಟ್ರಂಪ್‌ ಅವರ ಅಟಾರ್ನಿ ರುಡಿ ಗಿಯುಲಿಯಾನಿ ತಿಳಿಸಿದ್ದಾರೆ.

ನ.7ರಂದು ಪೆನ್ಸಿಲ್ವೇನಿಯಾ, ಮಿಷಿಗನ್ ಮತ್ತು ವಿಸ್ಕಾನ್ಸಿನ್‌ನಲ್ಲಿ ಡೆಮಾಕ್ರಾಟಿಕ್‌ ಪಕ್ಷವು ಮೇಲುಗೈ ಸಾಧಿಸಿತ್ತು.

ರಿಪಬ್ಲಿಕನ್‌ ಪಕ್ಷದ ಭದ್ರಕೋಟೆಯಾಗಿದ್ದ ಜಾರ್ಜಿಯಾದಲ್ಲೂ ಬೈಡನ್‌ ಅವರು ಗೆಲುವಿನ ನಗೆ ಬೀರಿದ್ದಾರೆ. 1992ರ ಬಳಿಕ ಜಾರ್ಜಿಯಾದಲ್ಲಿ ಇದೇ ಮೊದಲ ಬಾರಿ ಡೆಮಾಕ್ರಾಟಿಕ್‌ ಪಕ್ಷ ವಿಜಯ ಪತಾಕೆ ಹಾರಿಸಿದೆ.

ಜಾರ್ಜಿಯಾದಲ್ಲಿ 16 ಮತಗಳೊಂದಿಗೆ ಬೈಡನ್‌ ಒಟ್ಟು 306 ಎಲೆಕ್ಟೋರಲ್‌ ಮತಗಳನ್ನು ಗಳಿಸಿದ್ದಾರೆ. ಟ್ರಂಪ್‌ ಅವರು 232 ಮತಗಳನ್ನು ಹೊಂದಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಅಭ್ಯರ್ಥಿ 270 ಎಲೆಕ್ಟೋರಲ್‌ ಮತಗಳನ್ನು ಪಡೆದಿರಬೇಕು.

ಆದರೆ, ಡೊನಾಲ್ಡ್‌ ಟ್ರಂಪ್ ಅವರು ಮಾತ್ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಸ್ವೀಕರಿಸಲು ಸಿದ್ಧರಿಲ್ಲ. ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

‘ಈ ಚುನಾವಣೆಯಲ್ಲಿ ಬಹುದೊಡ್ಡ ಅಕ್ರಮವಾಗಿದೆ. ಅಟ್ಲಾಂಟಾ, ಡೆಟ್ರಾಯಿಟ್, ಮಿಲ್ವಾಕೀ, ಫಿಲಿಡೆಲ್ಪಿಯಾ ಸೇರಿದಂತೆ ಇತರೆ ರಾಜ್ಯಗಳ ಮತದಾನದಲ್ಲಿ ವಂಚನೆ ನಡೆದಿದೆ. ಈ ನಗರಗಳು ಡೆಮಾಕ್ರಾಟಿಕ್‌ ಪಕ್ಷದಿಂದ ನಿಯಂತ್ರಿಸಲ್ಪಡುತ್ತಿದೆ’ ಎಂದು ರುಡಿ ಗಿಯುಲಿಯಾನಿ ದೂರಿದ್ದಾರೆ.

‘ಈ ರೀತಿಯ ವಂಚನೆ ನಡೆಯಲು ನಾವು ಬಿಡುವುದಿಲ್ಲ. ಅವರು ಅಮೆರಿಕನ್ನರ ಮತಗಳನ್ನು ಕದ್ದಿದ್ದಾರೆ. ಇಲ್ಲಿನ ನಾಗರಿಕರು ಡೊನಾಲ್ಡ್‌ ಟ್ರಂಪ್‌ ಅವರನ್ನು ತಮ್ಮ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆಯೇ ವಿನಾ ಜೋ ಬೈಡನ್‌ ಅವರನ್ನಲ್ಲ. ಬೈಡನ್‌ ಮತದಾನದಲ್ಲಿ ನಡೆದ ಅಕ್ರಮದಿಂದಾಗಿ ಮುಂದಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT