ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭಿಸಲು ಡೊನಾಲ್ಡ್‌ ಟ್ರಂಪ್‌ ಸೂಚನೆ

Last Updated 24 ನವೆಂಬರ್ 2020, 7:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಟ್ರಂಪ್‌ ಅವರು ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭಿಸಲು ಸಿದ್ಧರಿದ್ದಾರೆ ಎಂದುಸಾಮಾನ್ಯ ಸೇವೆಗಳ ನಿರ್ವಾಹಕರಾದ (ಜಿಎಸ್ಎ) ಎಮಿಲಿ ಮರ್ಫಿ ಅವರು ಜೋ ಬೈಡನ್‌ ಅವರಿಗೆ ಪತ್ರ ಬರೆದಿದ್ದರು.

‘ಕಾನೂನು ಮತ್ತು ಲಭ್ಯವಿರುವ ವಿಷಯಗಳ ಆಧಾರದಲ್ಲಿ ಸ್ವತಂತ್ರವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ಈ ನಿರ್ಧಾರ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಶಾಖೆಯ ಅಧಿಕಾರಿಗಳಾಗಲಿ, ಶ್ವೇತ ಭವನದ ಅಧಿಕಾರಿಗಳಾಗಲಿ ಒತ್ತಡ ಹೇರಲಿಲ್ಲ’ ಎಂದು ಎಮಿಲಿ ಮರ್ಫಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಟ್ರಂಪ್‌, ‘ಜಿಎಸ್‌ಎಯ ದೇಶದ ಮೇಲಿನ ನಿಷ್ಠೆಕ್ಕಾಗಿ ನಾನು ಎಮಿಲಿ ಮರ್ಫಿ ಅವರಿಗೆ ಧನ್ಯವಾದ ಹೇಳುತ್ತೇನೆ. ನಾವು ಚುನಾವಣಾ ಅಕ್ರಮದ ವಿರುದ್ಧ ಹೋರಾಡುತ್ತೇವೆ.ಮೇಲುಗೈ ಸಾಧಿಸುತ್ತೇವೆ’ ಎಂದಿದ್ದಾರೆ.

‘ದೇಶದ ಹಿತದೃಷ್ಟಿಯಿಂದ ನಿಯಮಾನುಸಾರ ಏನು ಮಾಡಬೇಕು ಅದನ್ನೇ ಮಾಡಿ ಎಂದು ಎಮಿಲಿಗೆ ನಾನು ಸಲಹೆ ನೀಡುತ್ತೇನೆ. ನನ್ನ ತಂಡ ಕೂಡ ಅದನ್ನೇ ಪಾಲಿಸುತ್ತದೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ನವೆಂಬರ್‌ 3 ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದ ಟ್ರಂಪ್‌ ಹಾಗೂ ಅವರ ಪ್ರಚಾರ ತಂಡವು ಫಲಿತಾಂಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT