ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್‌ ಟ್ರಂಪ್‌ಗೆ ಕೋವಿಡ್‌: ಮುಂದಿನ ಎರಡು ದಿನಗಳು ನಿರ್ಣಾಯಕ

Last Updated 4 ಅಕ್ಟೋಬರ್ 2020, 2:25 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ವೈರಸ್‌ನಿಂದ ಸೋಂಕಿತರಾಗಿ ಆಸ್ಪತ್ರೆಗೆ ಸೇರಿ ಎರಡು ದಿನಗಳಾಗಿರುವ ಹೊತ್ತಿನಲ್ಲೇ, ಅವರ ಆರೋಗ್ಯದ ಬಗ್ಗೆ ಶ್ವೇತಭವನವು ಶನಿವಾರ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದೆ. ಈ ಗೊಂದಲ ನಿವಾರಿಸಲು ಸ್ವತಃ ಟ್ರಂಪ್‌ ಅವರೇ ವಿಡಿಯೊ ಮಾಡಿ ನೈಜ ಸಂಗತಿ ಬಹಿರಂಗ ಪಡಿಸಬೇಕಾಯಿತು.

ಅಧ್ಯಕ್ಷರ ಆರೋಗ್ಯ ಸ್ಥಿತಿಯ ಬಗ್ಗೆ ಅವರ ವೈದ್ಯರು, ಕ್ಯಾಮೆರಾಗಳ ಎದುರು ಬಂದು ಆಶಾದಾಯಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದರೆ, ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದ ಹೊರಗೆ ವರದಿಗಾರರೊಂದಿಗೆ ಮಾತನಾಡಿದ ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್, ‘ಟ್ರಂಪ್‌ ಅವರ ಆರೋಗ್ಯ ಆತಂಕಕಾರಿಯಾಗಿದೆ. ಎಚ್ಚರಿಕೆಯಿಂದ ಇರಬೇಕಾದ ಸನ್ನಿವೇಶ ಎದುರಾಗಿದೆ. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಎರಡು ದಿನಗಳು ನಿರ್ಣಾಯಕವಾಗಿರಲಿವೆ,’ ಎಂದು ಅವರು ಹೇಳಿದರು. ಆದರೆ, ಮೆಡೋಸ್‌ ಕ್ಯಾಮೆರಾಗಳ ಎದುರು ಹೇಳಿಕೆ ನೀಡಲು ನಿರಾಕರಿಸಿದರು.

ಈ ವ್ಯತಿರಿಕ್ತ ಹೇಳಿಕೆಗಳಿಂದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕೆರಳಿಸಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಹೀಗಾಗಿ ಕೂಡಲೇ ಮಧ್ಯಪ್ರವೇಶ ಮಾಡಿದ ಅವರು, ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ವಿಡಿಯೊ ಬಿಡುಗಡೆ ಮಾಡಿದ್ದಾರೆ. ‘ನಾನು ಈಗ ಹೆಚ್ಚು ಆರಾಮವಾಗಿದ್ದೇನೆ. ನನ್ನ ಆರೋಗ್ಯಕ್ಕಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ನನ್ನ ಸೌಖ್ಯದ ದೃಷ್ಟಿಯಿಂದ ಮುಂದಿನ ಎರಡು ದಿನಗಳು ನಿಜವಾದ ಪರೀಕ್ಷೆಯಾಗಿರಲಿದೆ. ಕೋವಿಡ್‌ ಅನ್ನು ಗೆದ್ದು ಬರಲಿದ್ದೇನೆ. ಅಮೆರಿಕವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾಗಿರುವುದರಿಂದ ನಾನು ಹಿಂದಿರುಗಿ ಬರಲೇಬೇಕಾಗಿದೆ,’ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT