ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಪಟ್ಟಿ: ಭೀಕರ ಅಗ್ನಿ ಅವಘಡ– 21 ಮಂದಿ ಸಾವು

Last Updated 18 ನವೆಂಬರ್ 2022, 2:34 IST
ಅಕ್ಷರ ಗಾತ್ರ

ಜೆರುಸಲೆಮ್: ಗಾಜಾ ಪಟ್ಟಿಯ ಪಾರ್ಟಿಯೊಂದರಲ್ಲಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 21 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಕಾಣಿಸಿಕೊಂಡ ಬೆಂಕಿ ಸ್ವಲ್ಪ ಸಮಯದಲ್ಲೇ ಬಹುಮಹಡಿ ಕಟ್ಟಡವನ್ನೆಲ್ಲ ಆವರಿಸಿ ಭಾರಿ ಸಾವುನೋವಿಗೆ ಕಾರಣವಾಗಿದೆ.

ಉತ್ತರ ಗಾಜಾದ ಜಬಾಲಿಯದಲ್ಲಿ ಸಂಭವಿಸಿರುವ ಈ ಅವಘಡ ಇಸ್ರೇಲಿ-ಪ್ಯಾಲೆಸ್ಟೀನಿಯನ್ ಸಂಘರ್ಷದ ಹಿಂಸಾಚಾರವನ್ನು ಮೀರಿ ಇತ್ತೀಚಿನ ದಿನಗಳಲ್ಲಿ ಗಾಜಾದಲ್ಲಿ ಸಂಭವಿಸಿದ ಭೀಕರ ಅವಘಡಗಳಲ್ಲಿ ಒಂದಾಗಿದೆ.

ಪಾರ್ಟಿ ನಡೆಯುತ್ತಿದ್ದ ಅಪಾರ್ಟ್‌ಮೆಂಟ್‌ನೊಳಗೆ ಗ್ಯಾಸೋಲಿನ್ ಶೇಖರಿಸಿಟ್ಟಿದ್ದದ್ದು ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಲು ಕಾರಣವಾಗಿದ್ದು, ಸಾವಿನ ಸಂಖ್ಯೆ ಸಹ ಹೆಚ್ಚಿದೆ ಎಂದು ಗಾಜಾದ ಆಂತರಿಕ ಸಚಿವಾಲಯ ತಿಳಿಸಿದೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದೂ ಅದು ಹೇಳಿದೆ.

‘ಪ್ರಾಥಮಿಕ ತನಿಖೆ ವೇಳೆ ಮನೆಯೊಳಗೆ ಹೆಚ್ಚಿನ ಪ್ರಮಾಣದ ಗ್ಯಾಸೋಲಿನ್ ಸಂಗ್ರಹಣೆ ಬೆಂಕಿಯು ಬೃಹತ್ ಪ್ರಮಾಣದಲ್ಲಿ ಉಲ್ಬಣಕ್ಕೆ ಮತ್ತು ಸಾವು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ’ ಎಂದು ಸಚಿವಾಲಯದ ವಕ್ತಾರ ಇಯಾದ್ ಅಲ್-ಬಾಜಿಮ್ ಹೇಳಿದರು.

ನಿವೃತ್ತ ಫಿಸಿಯೋಥೆರಪಿಸ್ಟ್ ಡಾ. ಫರಾಜ್ ಅಬು ರಾಯಾ ಅವರು ಮೂರನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಕೈರೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವ ಅವರ ಮಗನ ಪದವಿಯನ್ನು ಸಂಭ್ರಮಿಸಲು ಪಾರ್ಟಿ ಆಯೋಜಿಸಿದ್ದರು. ಕುಟುಂಬದ ಸದಸ್ಯರೆಲ್ಲ ಅಲ್ಲಿ ಸೇರಿದ್ದರು ಎಂದು ಆರೋಗ್ಯ ಸಚಿವಾಲಯದ ವಕ್ತಾರ ಡಾ. ಮೇಧತ್ ಅಬ್ಬಾಸ್ ತಿಳಿಸಿದ್ದಾರೆ.

ಪಾರ್ಟಿಗೆ ಗಂಟೆಗಳ ಮೊದಲು ಈಜಿಪ್ಟ್‌ನಿಂದ ಗಾಜಾಕ್ಕೆ ಹಿಂದಿರುಗಿದ್ದ ಅಬು ರಾಯಾ ಮತ್ತು ಅವರ ಮಗ ಮಹರ್ ಫರಾಜ್ ಅಬು ರಾಯಾ ಅವರು ಸಾವಿಗೀಡಾದ 21 ಮಂದಿಯಲ್ಲಿ ಸೇರಿದ್ದಾರೆ.

ಒಂದು ಗಂಟೆ ಕಾಲ ಶ್ರಮಪಟ್ಟ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ. ಆದರೆ, ಬೆಂಕಿ ವೇಗವಾಗಿ ಹರಡಿದ್ದರಿಂದ ಅಧಿಕ ಸಾವುಗಳು ಸಂಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT